ಕಳಸ | ವಿದ್ಯುತ್ ಸ್ಪರ್ಶಿಸಿ ಗುತ್ತಿಗೆದಾರ ಮೃತ್ಯು
Update: 2025-10-16 14:15 IST
ಕಳಸ : ವಿದ್ಯುತ್ ಸ್ಪರ್ಶಿಸಿ ವಿದ್ಯುತ್ ಗುತ್ತಿಗೆದಾರರೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕರಿಮನೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮುಹಮ್ಮದ್ ಇಸ್ಮಾಯಿಲ್(42) ಮೃತಪಟ್ಟ ವಿದ್ಯುತ್ ಗುತ್ತಿಗೆದಾರ.
ಗುಡುಗು ಸಿಡಿಲು ಹಾಗೂ ಮಳೆ ನಡುವೆ ಕರಿಮನೆ ಎಸ್ಟೇಟ್‌ನಲ್ಲಿರುವ ಕೂಲಿ ಲೈನ್‌ಗೆ ವಿದ್ಯುತ್ ಸಂಪರ್ಕ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ಅಘಾತ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಕಳಸ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಈ ವೇಳೆಗೆ ಅವರು ಮೃತಪಟ್ಟಿದ್ದರು.