×
Ad

ಚಿಕ್ಕಮಗಳೂರು | ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲು; ಮುಂದುವರೆದ ಶೋಧ ಕಾರ್ಯ

Update: 2025-02-17 13:02 IST

ಜಲಾಲ್(25) 

ಚಿಕ್ಕಮಗಳೂರು : ಭದ್ರಾ ನದಿಗೆ ಈಜಲು ಸ್ನೇಹಿತರೊಂದಿಗೆ ತರಳಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಎನ್.ಆರ್.ಪುರ ತಾಲೂಕಿನ ಗಡಿಗೇಶ್ವರದಲ್ಲಿ ರವಿವಾರ(ಫೆ.16) ನಡೆದಿದೆ.

ಜಲಾಲ್(25) ನೀರುಪಾಲಾದ ಯುವಕ ಎಂದು ತಿಳಿದು ಬಂದಿದೆ. ಮೂವರು ಸ್ನೇಹಿತರು ಬಾಳೆಹೊನ್ನೂರಿನ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ಜಲಾಲ್ ನದಿಯ ಸುಳಿಗೆ ಸಿಲುಕಿ ನೀರು ಪಾಲಾಗಿದ್ದಾನೆ. ಸ್ನೇಹಿತರು ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಘಟನೆ ಸಂಬಂಧ ಸ್ಥಳಕ್ಕಾಗಮಿಸಿದ ಪೊಲೀಸರು , ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಜಲಾಲ್ ದೇಹಕ್ಕಾಗಿ ಶೋಧಕಾರ್ಯಾಚರಣೆ ನಡೆಸಿದರು. ಆದರೆ ನಿನ್ನೆ(ಫೆ.16) ಸಂಜೆವರೆಗೂ ದೇಹ ಪತ್ತೆಯಾಗದೆ ಹುಡುಕಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಇಂದು(ಫೆ.17) ಮುಳುಗು ತಜ್ಞರು ಮತ್ತು ಅಗ್ನಿಶಾಮಕ ದಳದಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News