×
Ad

ಚಿಕ್ಕಮಗಳೂರು: ಮಗುವನ್ನು ಕಿಡ್ನಾಪ್ ಮಾಡಿದ ಮಹಿಳೆ; ಪ್ರಕರಣ ದಾಖಲು

Update: 2024-10-25 10:18 IST

PC: stock.adobe.com

ಚಿಕ್ಕಮಗಳೂರು: ಎರಡು ವರ್ಷದ ಮಗುವನ್ನು ಮಹಿಳೆಯೊಬ್ಬರು ಕಿಡ್ನಾಪ್ ಮಾಡಿದ ಘಟನೆ ಕಡೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ಶುಕ್ರವಾರ ನಡೆದಿದೆ.

ಕಡೂರು ತಾಲೂಕಿನ ಸೀತಾಪುರ ಗ್ರಾಮದ ಮಾನಸ (2) ಅಪಹರಣಕ್ಕೊಳಗಾದ ಮಗು. ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡುವಂತೆ ನಾಟಕವಾಡಿದ ಮಹಿಳೆ, ಪಕ್ಕದ ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ ಮಗುವನ್ನು ಹೊತ್ತೊಯ್ದ ಮಹಿಳೆ,ಮಗು ಕಾಣಿಸದಂತೆ ಸೀರೆಯ ‌ ಸೆರಗು ಮುಚ್ಚಿಕೊಂಡು ತೆರಳಿದ್ದಾಳೆ ಎನ್ನಲಾಗಿದೆ.

ದೀಪಾವಳಿ ಹಬ್ಬಕ್ಕೆಂದು ಬಟ್ಟೆ ಖರೀದಿಗೆಂದು ರಾಘು ನಾಯಕ್ ದಂಪತಿ ಬಂದಿದ್ದರು. ಈ ವೇಳೆ ಮಗು ಮಾನಸ ಮತ್ತು ತಂದೆ ರಘುನಾಯಕ್ ಎಣ್ಣೆ ಗಾಣದ ಅಂಗಡಿಗೆ ತೆರಳಿದ್ದರು. ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಮಹಿಳೆ, ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಿದ್ದಾಳೆ.

ನಾಪತ್ತೆಯಾದ ಮಗಳಿಗಾಗಿ ತಂದೆ ರಘುನಾಯ್ಕ್ ಹುಡುಕಾಟ ನಡೆಸಿದ್ದು, ಬಟ್ಟೆ ಅಂಗಡಿಯ ಮುಂದಿನ ಸಿಸಿ ಕ್ಯಾಮರಾದಲ್ಲಿ ಮಗುವಿನ ಕಿಡ್ನಾಪ್ ದೃಶ್ಯ  ಸೆರೆಯಾಗಿದೆ.

ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News