ಚಿಕ್ಕಮಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ, ಜೀವ ಬೆದರಿಕೆ ಆರೋಪ; ಓರ್ವನ ಬಂಧನ
ಚಿಕ್ಕಮಗಳೂರು: ಮಹಿಳೆಯೊಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಅವರ ಸ್ನೇಹಿತರಿಗೆ ಕಳುಹಿಸಿ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶ್ರೀನಿವಾಸನಗರದ ಆದಿತ್ಯ (40) ಎಂದು ಗುರುತಿಸಲಾಗಿದೆ.
ಫೋನ್ ಕರೆ ಮೂಲಕ ಪರಿಚಯವಾದ ಜಯನಗರದ ಮಹಿಳೆಯೊಬ್ಬರಿಗೆ ಆರೋಪಿ ಆದಿತ್ಯನು ವಾಟ್ಸಾಪ್ ಕಾಲ್ ಮುಖಾಂತರ ನಿರಂತರವಾಗಿ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನ ವೈಯಕ್ತಿಕ ಫೋಟೋಗಳನ್ನು ಪಡೆದು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಗೂ ನನ್ನ ಸ್ನೇಹಿತರಿಗೆ ಕಳುಹಿಸಿ, ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆ ಹಾಕಿರುವುದಾಗಿ ಮಹಿಳೆಯು ಅ.28 ರಂದು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಮಹಿಳೆ ನೀಡಿರುವ ದೂರಿನನ್ವಯ ಠಾಣಾ ಮೊಕದ್ದಮೆ ಸಂಖ್ಯೆ:182/25 ರಲ್ಲಿ 75(2),78 ಬಿಎನ್ಎಸ್ ಕಾಯ್ದೆ & 67, 67(A) ಐಟಿ ಕಾಯ್ದೆ ಹಾಗೂ ಕಲಂ (4) The Indescent Representation of Women (Prohibition) Act ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.