×
Ad

ಬಾಬಾ ಬುಡಾನ್ ದರ್ಗಾ ಖಬರ್‌ಸ್ತಾನದ ದ್ವಾರ ತೆರೆಯಲು ಮನವಿ

Update: 2025-02-12 23:37 IST

 ಸೈಯದ್ ಫಕ್ರುದ್ದೀನ್ ಶಾ ಖಾದ್ರಿ

ಚಿಕ್ಕಮಗಳೂರು : ಶಅಬಾನ್ ದಿನದಂದು ಹಿರಿಯರು, ಪೂರ್ವಜರ ಸಮಾಧಿಗಳ ದರ್ಶನ ಹಾಗೂ ಗೌರವ ಸಲ್ಲಿಸುವ ಧಾರ್ಮಿಕ ವಿಧಿಯನ್ನು ತಲತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಫೆ.14ರಂದು ಬಾಬಾ ಬುಡಾನ್‌ಸ್ವಾಮಿ ದರ್ಗಾದ ಗುಹೆ ಆವಣದಲ್ಲಿರುವ ಖಬರ್‌ಸ್ತಾನ(ಸ್ಮಶಾನ)ದ ದ್ವಾರಗಳನ್ನು ತೆರೆಯುವ ಮೂಲಕ ಧಾರ್ಮಿಕ ವಿಧಿ ನೆರವೇರಿಸಲು ಅವಕಾಶ ನೀಡಬೇಕು ಎಂದು ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಮನವಿ ಮಾಡಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಫೆ.14ರಂದು ಪವಿತ್ರ ಶಅಬಾನ್ ದಿನ ಇದ್ದು, ಅಂದು ನಾವು ಬಾಬಾ ಬುಡಾನ್ ಸ್ವಾಮಿ ದರ್ಗಾದಲ್ಲಿರುವ ನಮ್ಮ ಪೂರ್ವಜನರ ಗೋರಿಗಳ ದರ್ಶನ ಪಡೆದು ಗೌರವ ಸಲ್ಲಿಸಬೇಕಾಗಿರುವುದರಿಂದ ಜಿಲ್ಲಾಡಳಿತ ಫೆ.14ರಂದು ದರ್ಗಾದ ಆವರಣದಲ್ಲಿರುವ ಖಬರ್‌ಸ್ತಾನದ ದ್ವಾರಗಳನ್ನು ತೆರೆಯುವ ಮೂಲಕ ಜಿಲ್ಲಾಡಳಿತ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News