ಮಲೆನಾಡಲ್ಲಿ ಭಾರೀ ಮಳೆ; ರಸ್ತೆಗೆ ನುಗ್ಗಿದ ತುಂಗಾ ನದಿ ನೀರು
Update: 2025-07-27 10:55 IST
ಚಿಕ್ಕಮಗಳೂರು : ಮಲೆನಾಡಲ್ಲಿ ಭಾರೀ ಮಳೆ ಮುಂದುವರಿದಿದ್ದು, ಶೃಂಗೇರಿಯಲ್ಲಿ ತುಂಗಾ ನದಿ ತುಂಬಿ ನೀರು ರಸ್ತೆಗೆ ಹರಿಯುತ್ತಿದೆ.
ನಿರಂತರ ಗಾಳಿ-ಮಳೆಯಿಂದ ಮಲೆನಾಡಿಗರು ಹೈರಾಣಾಗಿದ್ದು, ರಸ್ತೆಯಲ್ಲಿ ಒಂದೂವರೆ-ಎರಡು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ.
ಶೃಂಗೇರಿಯ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗಾಂಧಿ ಮೈದಾನ, ಶರದಾಂಭೆ ದೇಗುಲದ ವಾಹನಗಳ ಪಾರ್ಕಿಂಗ್ ಜಾಗವೂ ಸಂಪೂರ್ಣ ಜಲಾವೃತ ಗೊಂಡಿದೆ.
ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ :
ಶೃಂಗೆರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ಗುಡ್ಡ ಕುಸಿತದಿಂದ ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಆಗುಂಬೆ ಘಾಟ್‌ನ ಉಡುಪಿ ಮೂಲಕ ಬದಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.