×
Ad

ಭಾರತ್-ಇಂಡಿಯಾ ಚರ್ಚೆ: ಅಕ್ಷಯ್‌ ಕುಮಾರ್‌ ನೂತನ ಚಿತ್ರದ ಹೆಸರು ಬದಲಾವಣೆ

Update: 2023-09-07 12:09 IST

Photo: Twitter/@MeghUpdates

ಮುಂಬೈ: ರಾಷ್ಟ್ರ ರಾಜಕಾರಣದಲ್ಲಿ ದೇಶದ ಹೆಸರು ಬದಲಾಯಿಸುವ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿದ್ದಂತೆಯೇ ಇದು ಸಿನೆಮಾ ರಂಗದ ಮೇಲೂ ಪ್ರಭಾವ ಬೀರಿದೆ.

ಅಕ್ಷಯ್ ಕುಮಾರ್ ಹೊಸ ಚಿತ್ರದ ಹೆಸರಲ್ಲಿ ‘ಇಂಡಿಯಾ’ ಬದಲು ‘ಭಾರತ’ವನ್ನು ಬಳಸಿದ್ದಾರೆ.

ಬುಧವಾರ ʼಮಿಷನ್ ರಾಣಿಗಂಜ್‌ʼ ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಅದರಲ್ಲಿ ʼದಿ ಗ್ರೇಟ್ ಇಂಡಿಯನ್ ರೆಸ್ಕ್ಯೂʼನಿಂದ ʼದಿ ಗ್ರೇಟ್ ಭಾರತ್ ರೆಸ್ಕ್ಯೂʼ ಎಂದು ಚಿತ್ರತಂಡ ಶೀರ್ಷಿಕೆಯನ್ನು ಬದಲಿಸಿಕೊಂಡಿದೆ.

ದೇಶದ ಹೆಸರನ್ನು ಅಧಿಕೃತವಾಗಿ ಭಾರತ್ ಎಂದು ಮರುನಾಮಕರಣ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಿರುಸಿನ ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ ಅಕ್ಷಯ್‌ ಕುಮಾರ್‌ ಅವರ ಚಿತ್ರದ ಶೀರ್ಷಿಕೆ ಬದಲಾಗಿದೆ.

ರುಸ್ತಮ್ ಚಿತ್ರದ ನಿರ್ದೇಶಕ ಟಿನು ಸುರೇಶ್ ದೇಸಾಯಿ ಅವರು ನಿರ್ದೇಶಿಸಿದ ಮತ್ತು ವಶು ಮತ್ತು ಜಾಕಿ ಭಗ್ನಾನಿ ಅವರ ಪೂಜಾ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಕೂಡ ನಟಿಸಿದ್ದಾರೆ. ಗುರುವಾರ ಟೀಸರ್ ಬಿಡುಗಡೆಯಾಗಲಿದ್ದು, ಅಕ್ಟೋಬರ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News