×
Ad

ಭಾರತೀಯ ಪೌರತ್ವ ಮರಳಿ ಪಡೆದ ಅಕ್ಷಯ್‌ ಕುಮಾರ್

Update: 2023-08-15 14:05 IST

Photo: Twitter/ @akshaykumar

ಹೊಸದಿಲ್ಲಿ: ಕೆನಡಾದ ಪೌರತ್ವದ ಬಗ್ಗೆ ಆಗಾಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೂ ಕೊನೆಗೂ ಭಾರತದ ಪೌರತ್ವವನ್ನು ಮರಳಿ ಪಡೆದಿದ್ದಾರೆ. ದೇಶದ 77 ನೇ ಸ್ವಾತಂತ್ರ್ಯ ದಿನದಂದು ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ವರದಿಯಾಗಿದೆ.

"ಹೃದಯ (ದಿಲ್‌) ಹಾಗೂ ಪೌರತ್ವ, ಎರಡೂ ಭಾರತೀಯ (ಹಿಂದೂಸ್ತಾನಿ). ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಜೈ ಹಿಂದ್!," ಎಂದು ಪೌರತ್ವ ನೋಂದಣಿ ದಾಖಲೆಯನ್ನು ಹಂಚಿಕೊಂಡು ಅಕ್ಷಯ್ ಕುಮಾರ್ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತನ್ನ ʼದೇಶಪ್ರೇಮʼ ಪ್ರಶ್ನಾರ್ಹಗೊಳ್ಳುತ್ತಿರುವುದರಿಂದ ನನಗೆ ನಿರಾಶೆಯಾಗಿದೆ ಎಂದು ಅಕ್ಷಯ್ ಕುಮಾರ್ ಈ ಹಿಂದೆ ಹೇಳಿದ್ದರು.

"ಭಾರತವೇ ನನಗೆ ಸರ್ವಸ್ವ... ನಾನು ಗಳಿಸಿದ್ದೆಲ್ಲವೂ ಇಲ್ಲಿಂದ. ಇಲ್ಲಿಗೆ ಮರಳಿ ಕೊಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಜನರು ಏನನ್ನೂ ತಿಳಿಯದೆ ಹೇಳಿದಾಗ ಬೇಸರವಾಗುತ್ತದೆ..., " ಎಂದು ಅಕ್ಷಯ್‌ ಕುಮಾರ್‌ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು.

2019 ರಲ್ಲಿ ಅವರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, COVID-19 ಸಾಂಕ್ರಾಮಿಕ ರೋಗದಿಂದಾಗಿ ಪ್ರಕ್ರಿಯೆಯು ವಿಳಂಬವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News