×
Ad

ಪಾನ್‌ ಮಸಾಲಾ ಉತ್ಪನ್ನದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿರುವೆ ಎಂಬ ಸುದ್ದಿ ಸುಳ್ಳು: ಅಕ್ಷಯ್‌ ಕುಮಾರ್‌

Update: 2023-10-10 15:16 IST

Screengrab: X/@NishantADHolic_

ಹೊಸದಿಲ್ಲಿ : ತಾನು ಹಿಂದೆ ಸರಿದಿದ್ದ ಪಾನ್‌ ಮಸಾಲಾ ಬ್ರ್ಯಾಂಡ್‌ ಒಂದರ ಜಾಹೀರಾತಿನಲ್ಲಿ ಮತ್ತೆ ಕಾಣಿಸಿಕೊಂಡು ಅದರ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿರುವೆ ಎಂಬ ಸುದ್ದಿಗಳನ್ನು ನಟ ಅಕ್ಷಯ್‌ ಕುಮಾರ್ ತಳ್ಳಿ ಹಾಕಿದ್ದಾರೆ ಹಾಗೂ ಅದನ್ನು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ವಿಮಲ್‌ ಪಾನ್‌ ಮಸಾಲಾ ಬ್ರ್ಯಾಂಡ್‌ ಜಾಹೀರಾತಿನಿಂದ ಕೆಲ ಸಮಯದ ಹಿಂದೆ, ಅಕ್ಷಯ್‌ ಹಿಂದೆ ಸರಿದು ತಮ್ಮ ಕ್ಷಮೆಯನ್ನೂ ಯಾಚಿಸಿದ್ದರು. ಆದರೆ ಇತ್ತೀಚೆಗೆ ಅದೇ ಬ್ರ್ಯಾಂಡ್‌ನಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಂತರ ಸುದ್ದಿ ಪೋರ್ಟಲ್‌ ಒಂದು ವರದಿ ಪ್ರಕಟಿಸಿ, ಅವರು ಅದೇ ಕಂಪೆನಿಯ ಉತ್ಪನ್ನದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್‌ “ಅದು ನಕಲಿ ಸುದ್ದಿ, ಆ ಜಾಹೀರಾತನ್ನು ಅಕ್ಟೋಬರ್‌ 13, 2021 ರಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಂಸ್ಥೆಯ ಜಾಹೀರಾತಿನಿಂದ ವಾಪಸ್‌ ಸರಿದಂದಿನಿಂದ ಅದರ ಜೊತೆ ನಂಟು ಹೊಂದಿಲ್ಲ. ಆದರೆ ಅವರು ಈಗಾಗಲೇ ಚಿತ್ರೀಕರಿಸಿರುವ ಜಾಹೀರಾತನ್ನು ಕಾನೂನು ಪ್ರಕಾರ ಮುಂದಿನ ತಿಂಗಳ ಅಂತ್ಯದ ತನಕ ಪ್ರದರ್ಶಿಸಬಹುದಾಗಿದೆ,” ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News