×
Ad

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಶಾರೂಖ್ ಖಾನ್ ಚಿತ್ರದ ಪೋಸ್ಟರ್ ಬಿಡುಗಡೆ

Update: 2023-10-22 12:46 IST

Photo:X/@homescreenent

ಮುಂಬೈ: ಜವಾನ್ ಹಾಗೂ ಪಠಾಣ್ ಗೆಲುವಿನ ಅಲೆಯಲ್ಲಿರುವ ಶಾರೂಖ್ ಖಾನ್ ಈ ವರ್ಷ ಮತ್ತೊಮ್ಮೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಚಿತ್ರ ಡಿಸೆಂಬರ್ 23 ಕ್ಕೆ ತೆರೆಕಾಣಲಿದ್ದು, ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಪಿಕೆ, 3 ಈಡಿಯಟ್ಸ್ ಮೊದಲಾದ ಸದಭಿರುಚಿಯ ಚಿತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರುವ ಹಿರಾನಿ ಅವರ ಹೊಸ ಚಿತ್ರಕ್ಕೆ ನಿರೀಕ್ಷೆಗಳೂ ಹೆಚ್ಚಾಗಿದೆ.

ಭಾರತದ ಬಹುತೇಕ ಪ್ರದೇಶಗಳಲ್ಲಿ ‘ಡಂಕಿ’ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ಸಜ್ಜಾಗಿದೆ. ಜವಾನ್‌ನ ಐತಿಹಾಸಿಕ ಯಶಸ್ಸಿನ ನಂತರ, ಡಂಕಿಯನ್ನು ದೇಶಾದ್ಯಂತ ಬಿಡುಗಡೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಫಸ್ಟ್ ಲುಕ್ ಪೋಸ್ಟರ್ ಮೇಲೆ, “ತಮ್ಮ ಭರವಸೆಯನ್ನು ಉಳಿಸಿಕೊಳ್ಳಲು ಯೋಧನೊಬ್ಬನ ಪಯಣ” ಎಂಬ ಅಡಿ ಟಿಪ್ಪಣಿ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News