×
Ad

ಕಾಜಲ್‌ ಅಗರವಾಲ್‌ ಅಪಘಾತದ ಸುಳ್ಳು ಸುದ್ದಿ; ನಟಿ ಸ್ಪಷ್ಟನೆ

Update: 2025-09-09 13:05 IST

ನಟಿ ಕಾಜಲ್‌ ಅಗರವಾಲ್ (Photo: Instagram/kajalaggarwalofficial)

ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್‌ ಅಗರವಾಲ್ ಅವರು ಭೀಕರ ರಸ್ತೆ ಅಪಘಾತಕ್ಕೀಡಾಗಿ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರದಿಂದ ವ್ಯಾಪಕವಾಗಿ ವೈರಲ್ ಆಗಿ, ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.

ಈ ಕುರಿತು ತಕ್ಷಣವೇ ಸ್ಪಷ್ಟನೆ ನೀಡಿದ ನಟಿ ಕಾಜಲ್‌, “ನಾನು ಅಪಘಾತಕ್ಕೀಡಾಗಿದ್ದೇನೆ, ಮೃತಪಟ್ಟಿದ್ದೇನೆ ಎಂಬ ಆಧಾರರಹಿತ ಸುದ್ದಿಗಳು ನನ್ನ ಗಮನಕ್ಕೆ ಬಂದಿವೆ. ನಿಜ ಹೇಳಬೇಕಾದರೆ, ಇದು ಸಂಪೂರ್ಣ ಸುಳ್ಳು ಹಾಗೂ ಅಸಂಬದ್ಧವಾದ ವದಂತಿ. ದೇವರ ದಯೆಯಿಂದ ನಾನು ಕ್ಷೇಮವಾಗಿದ್ದೇನೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ನಂಬದಿರಿ ಮತ್ತು ಹರಡದಿರಿ. ಸಕಾರಾತ್ಮಕ ಚಿಂತನೆ ಹಾಗೂ ಸತ್ಯದ ಮೇಲೆ ಗಮನಹರಿಸೋಣ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಕಾಜಲ್‌ ಅವರ ಆರೋಗ್ಯ ಸ್ಥಿತಿಗೆ ಕಳವಳ ವ್ಯಕ್ತಪಡಿಸಿ ಸಂತಾಪ ಸಂದೇಶಗಳನ್ನು ಹಂಚಿಕೊಂಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News