×
Ad

ಅತ್ಯಾಚಾರ ಆರೋಪ: ವಿಚಾರಣೆಗೆ ಹಾಜರಾದ ಮಲಯಾಳಂ ನಟ ಸಿದ್ದೀಕ್

Update: 2024-10-07 13:05 IST

ನಟ ಸಿದ್ದೀಕ್ (Photo: PTI)

ಕೇರಳ: ನಟಿಯೋರ್ವರ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಮಲಯಾಳಂ ನಟ ಸಿದ್ದೀಕ್ ಸೋಮವಾರ ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಸ್ಪರ್ಜನ್ ಕುಮಾರ್ ಅವರ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

2016ರಲ್ಲಿ ನಗರದ ಹೊಟೇಲ್ ವೊಂದರಲ್ಲಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ ವಿಶೇಷ ತನಿಖಾ ತಂಡವು ತನಿಖೆಯನ್ನು ನಡೆಸುತ್ತಿದೆ. ಪೊಲೀಸ್ ಆಯುಕ್ತರ ಕಚೇರಿಗೆ ನಟ ಬಿಜು ಪಪ್ಪನ್ ಮತ್ತು ಪುತ್ರ ಶಾಹೀನ್ ಜೊತೆ ಸಿದ್ದೀಕ್ ವಿಚಾರಣೆಗೆ ಹಾಜರಾಗಿದ್ದರು.

ಇತ್ತೀಚೆಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಸಿದ್ದೀಕ್ ಗೆ ಸುಪ್ರೀಂಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.

ಆಗಸ್ಟ್ 27ರಂದು ನಟಿಯೋರ್ವರ ದೂರಿನ ಮೇರೆಗೆ ಸಿದ್ದೀಕ್ ವಿರುದ್ಧ ತಿರುವನಂತಪುರಂನ ಮ್ಯೂಸಿಯಂ ಠಾಣೆಯ ಪೊಲೀಸರು ಅತ್ಯಾಚಾರ ಮತ್ತು ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News