×
Ad

ಕರ್ನಾಟಕದಲ್ಲಿ 'ಥಗ್ ಲೈಫ್' ಸಿನೆಮಾ ಬಿಡುಗಡೆ, ಪ್ರದರ್ಶನಕ್ಕೆ ತಡೆಯೊಡ್ಡದಂತೆ ಕೋರಿ ಹೈಕೋರ್ಟ್ ಗೆ ಅರ್ಜಿ

Update: 2025-06-02 16:42 IST

ಬೆಂಗಳೂರು: 'ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದ್ದು' ಎಂಬುದಾಗಿ ನಟ ಕಮಲ್ ಹಾಸನ್ ವಿವಾದ್ಮಾತಕ ಹೇಳಿಕೆ ನೀಡಿರುವುದರಿಂದ ಅವರ ಹೊಸ ಸಿನೆಮಾ 'ಥಗ್ ಲೈಫ್' ಕರ್ನಾಟಕದಲ್ಲಿ ಬಿಡುಗಡೆ, ಪ್ರದರ್ಶನಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸಿನೆಮಾದ ಸಹ ನಿರ್ಮಾಣ ಸಂಸ್ಥೆ ರಾಜ್ಕಮಲ್ ಫಿಲ್ಮ್ ಇಂಟರ್ ನ್ಯಾಶನಲ್ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿದೆ.

'ಥಗ್ ಲೈಫ್' ಜೂನ್ 5ರಂದು ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಸಿನೆಮಾ ಬಿಡುಗಡೆಯನ್ನು, ಪ್ರದರ್ಶನವನ್ನು ಯಾವುದೇ ರೀತಿಯಲ್ಲಿ ತಡೆಯುವ ಮತ್ತು ನಿರ್ಬಂಧಿಸುವಂತಹ ಕ್ರಮಗಳನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ತೆಗೆದುಕೊಳ್ಳದಂತೆ ಆದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೆ, ಸಿನೆಮಾ ಪ್ರದರ್ಶನವನ್ನು ತಡೆಯದಂತೆ ಸರಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ಬಂಧ ವಿಧಿಸಬೇಕು. ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರ ತಂಡಕ್ಕೆ ತೊಂದರೆಯಾಗದಂತೆ ಅಗತ್ಯ ಭದ್ರತೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News