×
Ad

ಬಿಗ್‌ ಬಾಸ್‌ ವೇದಿಕೆಯಲ್ಲಿ ಸಿಗರೇಟ್‌ ಹಿಡಿದಿರುವ ಸಲ್ಮಾನ್ ಖಾನ್ ಫೋಟೋ ವೈರಲ್

Update: 2023-07-10 17:50 IST

Photo : Twitter

ಮುಂಬೈ: ಜೂನ್‌ 17ರಂದು ಆರಂಭಗೊಂಡಂದಿನಿಂದ ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ಸಾಕಷ್ಟು ಸುದ್ದಿ ಮಾಡುತ್ತಿದೆ. ಕಳೆದ ವಾರದ ನಿರ್ವಹಣೆ ಕುರಿತು ಸ್ಪರ್ಧಿಗಳಿಗೆ ಕೆಲವೊಂದು ಸಲಹೆಸೂಚನೆಗಳನ್ನು ನೀಡಲು ಕಾರ್ಯಕ್ರಮದ ನಿರೂಪಕ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸೆಟ್‌ಗೆ ಆಗಮಿಸಿದ್ದರು. ಆದರೆ ಇತ್ತೀಚಿನ ವೀಕೆಂಡ್‌ ಕಾ ವಾರ್‌ಗೆ ಆಗಮಿಸುವಾಗ ಸಲ್ಮಾನ್‌ ಕೈಯ್ಯಲ್ಲಿ ಸಿಗರೇಟ್‌ ಇರುವುದು ಕಂಡು ಬಂದಿದೆ. ಈ ಕುರಿತ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ವೀಕೆಂಡ್‌ ಕಾ ವಾರ್‌ ಎಪಿಸೋಡ್‌ಗೆ ಫಾರ್ಮಲ್‌ ಉಡುಗೆ ಧರಿಸಿ ಬಂದಿದ್ದ ಸಲ್ಮಾನ್‌ ಸ್ಪರ್ಧಿಗಳೊಂದಿಗೆ ಮಾತನಾಡಿದ್ದರು. ಆದರೆ ಕೆಲ ವೀಕ್ಷಕರಿಗೆ ವೇದಿಕೆಗೆ ಬರುವಾಗ ಸಲ್ಮಾನ್‌ ಕೈಯ್ಯಲ್ಲಿ ಸಿಗರೇಟ್‌ ಇರುವುದು ಕಂಡುಬಂದಿದೆ. ತಕ್ಷಣ ಈ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ.

ಎಪಿಸೋಡ್‌ನಲ್ಲಿ ಬಿಗ್‌ ಬಾಸ್‌ ಒಟಿಟಿ 2 ತಂಡಕ್ಕೆ ತಮಗೆ ಶೋದಿಂದ ಹೊರಹೋಗಲು ಸೈರಸ್ ಬ್ರೋಚಾ ಅನುಮತಿ ಕೇಳಿದರು. ಸೈರಸ್‌ಗೆ ಕಾರ್ಯಕ್ರಮ ತಯಾರಕರೊಂದಿಗೆ ಕಾಂಟ್ರಾಕ್ಟ್‌ ಇದೆ ಹಾಗೂ ಹೊರಹೋಗಲು ಅವರು ದಂಡ ಪಾವತಿಸಬೇಕು ಎಂದು ಸಲ್ಮಾನ್ ಹೇಳಿದರು. ಕಾರ್ಯಕ್ರಮ ಆಯೋಜಕರು ದಂಡ ಮರೆತು ತಮ್ಮನ್ನು ನಿರ್ಗಮಿಸಲು ಅನುಮತಿಸಬಹುದು ಎಂದು ನಿರೀಕ್ಷಿಸುವುದಾಗಿ ಸೈರಸ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News