×
Ad

‘ಕಿಂಗ್’: ʼಪ್ಯಾನ್ ವರ್ಲ್ಡ್ʼ ಸಿನಿಮಾ ಘೋಷಿಸಿದ ಶಾರೂಖ್ ಖಾನ್

Update: 2024-11-07 11:17 IST

ಶಾರೂಖ್ ಖಾನ್ (PTI)

ಮುಂಬೈ: ‘ಕಿಂಗ್’ ತಮ್ಮ ಮುಂದಿನ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಘೋಷಿಸಿರುವ ಬಾಲಿವುಡ್ ನಟ ಶಾರೂಖ್ ಖಾನ್, ಜಾಗತಿಕ ಸಿನಿಮಾ ರಂಗದ ಮೇಲೆ ಭಾರತೀಯ ಸಿನಿಮಾಗಳ ಪ್ರಭಾವ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ತಮ್ಮ ಜನ್ಮದಿನದ ಅಂಗವಾಗಿ ಮುಂಬೈ ನಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾರೂಖ್ ಖಾನ್, ತಮ್ಮ ಅಂತಾರಾಷ್ಟ್ರೀಯ ಯಶಸ್ಸಿಗೆ ತಮ್ಮ ಅಭಿಮಾನಿಗಳು ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಮೆರಿಕಾದಿಂದ ಬಂದಿದ್ದ ಮಹಿಳೆಯೊಬ್ಬರು, ಪಠಾಣ್, ಜವಾನ್ ನಂತಹ ಚಿತ್ರಗಳ ನಂತರ ಶಾರೂಖ್ ಖಾನ್ ಜನಪ್ರಿಯತೆ ಹೇಗೆ ವಿಸ್ತರಿಸಿದೆ ಎಂಬುದನ್ನು ವಿವರಿಸಿ, “ನೀವು ಕೇವಲ ಪ್ಯಾನ್ ಇಂಡಿಯಾ ನಟರಲ್ಲ; ಬದಲಿಗೆ ಪ್ಯಾನ್ ವರ್ಲ್ಡ್ ನಟ” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ನಿಮ್ಮ ಸಿನಿಮಾಗಳನ್ನು ಮತ್ತಷ್ಟು ಜಾಗತಿಕಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾರೂಖ್ ಖಾನ್, “ನಾನು ಭಾರತವನ್ನು ಎಲ್ಲಿಗೆಲ್ಲ ಕರೆದೊಯ್ಯಲು ಅಸಾಧ್ಯವಾಗಿತ್ತೊ ಅಲ್ಲಿಗೆಲ್ಲ ಕರೆದೊಯ್ಯುತ್ತಿದ್ದೇನೆ. ಭಾರತ, ಭಾರತೀಯರು ಹಾಗೂ ಉಪ ಖಂಡದ ಜನರು ನಾನು ಎಲ್ಲೆಲ್ಲ ತಲುಪಲು ಸಾಧ್ಯವಿಲ್ಲ ಎಂದುಕೊಂಡಿದ್ದೆನೊ ಅಲ್ಲಿಗೆಲ್ಲ ನನ್ನನ್ನು ಕರೆದೊಯ್ದಿದ್ದಾರೆ” ಎಂದು ಕೃತಜ್ಞತೆ ಸಲ್ಲಿಸಿದರು.

‘ಕಿಂಗ್’ ಚಿತ್ರವನ್ನು ಸುಜೋಯ್ ಘೋಷ್ ನಿರ್ದೇಶಿಸುತ್ತಿದ್ದು, 2026ರ ಮಧ್ಯಭಾಗದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಶಾರೂಖ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್ ಹಾಗೂ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News