×
Ad

ದಾಖಲೆ ಬರೆದ ಶಾರುಖ್‌ ಖಾನ್‌ ಅಭಿನಯದ ʻಜವಾನ್ʼ

Update: 2023-09-08 14:50 IST

Photo: Twitter

ಮುಂಬೈ: ಶಾರುಖ್‌ ಖಾನ್‌ ಅಭಿನಯದ ʻಜವಾನ್ʼ ಸಿನೆಮಾ ಶಾರುಖ್‌ ಅವರ ಹಿಂದಿನ ಸಿನೆಮಾ ಪಠಾಣ್ ದಾಖಲೆಯನ್ನು ಮುರಿದಿದೆ. ಬಿಡುಗಡೆಯಾದ ದಿನದ ಕಲೆಕ್ಷನ್‌ನಲ್ಲಿ ದಾಖಲೆಯನ್ನೇ ಜವಾನ್‌ ಬರೆದಿದೆ. ಜವಾನ್‌ ಕಲೆಕ್ಷನ್‌ ಇಂದು ರೂ. 75 ಕೋಟಿ ಆಗಿದ್ದು ಅದರಲ್ಲಿ ಹಿಂದಿ ಭಾಷೆಯ ಚಲನಚಿತ್ರದ ಕಲೆಕ್ಷನ್‌ ರೂ. 65 ಕೋಟಿ ಆಗಿದೆ. ಉಳಿದ ಆದಾಯ ತಮಿಳು ಮತ್ತು ತೆಲುಗು ಆವೃತ್ತಿಗಳಿಂದ ಬಂದಿದೆ.

ಜವಾನ್‌ ಹಿಂದಿ ಸಿನೆಮಾದ ಮೊದಲನೇ ದಿನದ ಕಲೆಕ್ಷನ್‌ ರೂ. 60 ಕೋಟಿಗೂ ಅಧಿಕವಾಗಿರುವುದರಿಂದ ಈ ನಿಟ್ಟಿನಲ್ಲಿ ಈ ಸಿನೆಮಾ ದಾಖಲೆ ಸೃಷ್ಟಿಸಿದೆ. ಶಾರುಖ್‌ ಅವರ ಪಠಾಣ್‌ ಚಲನಚಿತ್ರ ಮೊದಲ ದಿನದಲ್ಲಿ ರೂ 57 ಕೋಟಿ ಗಳಿಸಿತ್ತು. ಪಠಾಣ್‌ ಚಿತ್ರದ ಎರಡನೇ ದಿನದ ಗಳಿಕೆ ರೂ 70 ಕೋಟಿ ಆಗಿದ್ದರೆ ಚಿತ್ರದ ಒಟ್ಟು ಗಳಿಕೆ ರೂ 543 ಕೋಟಿ ಆಗಿತ್ತು. ಈ ದಾಖಲೆಯನ್ನು ಪ್ರಸ್ತುತ ರೂ 510 ಕೋಟಿ ಗಳಿಸಿರುವ ಗದರ್-2 ಮುರಿಯುವ ನಿರೀಕ್ಷೆಯಿದೆ.

ಜವಾನ್‌ ಸಿನೆಮಾ ಪ್ರದರ್ಶನಗೊಂಡ ಥಿಯೇಟರುಗಳಲ್ಲಿ ಒಟ್ಟು ಸರಾಸರಿಯಾಗಿ ಶೇ 58ರಷ್ಟು ಸೀಟುಗಳು ಭರ್ತಿಗೊಂಡಿವೆ ಎಂದು ಕೆಲ ಅಂಕಿಸಂಖ್ಯೆಗಳು ತಿಳಿಸಿವೆ.

ಚೆನ್ನೈಯಲ್ಲಿ ಗರಿಷ್ಠ ಶೇ81ರಷ್ಟು ಸೀಟುಗಳು ಭರ್ತಿಯಾಗಿದ್ದರೆ ಮುಂಬೈಯಲ್ಲಿ ಶೇ 55, ದಿಲ್ಲಿಯಲ್ಲಿ ಶೇ 60, ಹೈದರಾಬಾದ್‌ನಲ್ಲಿ ಶೇ 75 ಮತ್ತು ಕೊಲ್ಕತ್ತಾದಲ್ಲಿ ಶೇ 73 ಸೀಟುಗಳು ಭರ್ತಿಯಾಗಿವೆ.

ಜವಾನ್‌ ಸಿನೆಮಾದ ತಮಿಳು ಆವೃತ್ತಿ ಪ್ರದರ್ಶಿತ ಥಿಯೇಟರುಗಳಲ್ಲಿ ಶೇ. 70 ಸೀಟುಗಳು ಭರ್ತಿಯಾಗಿವೆ. ಸಿನೆಮಾ ಜಾಗತಿಕವಾಗಿ 10,000 ಕಡೆ ಪ್ರದರ್ಶನಗೊಳ್ಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News