×
Ad

ಶಾರೂಖ್‌ ಖಾನ್‌ ‘ನೈಸರ್ಗಿಕ ಸಂಪತ್ತುʼ: ಕಿಂಗ್‌ ಖಾನ್‌ಗೆ ಉದ್ಯಮಿ ಆನಂದ್‌ ಮಹೀಂದ್ರ ಮೆಚ್ಚುಗೆ

Update: 2023-09-09 22:38 IST

ಶಾರುಖ್‌ ಖಾನ್‌ , ಆನಂದ್‌ ಮಹೀಂದ್ರ | Photo: PTI 

ಮುಂಬೈ: ‘ಜವಾನ್‌’ ಚಿತ್ರದ ಅಬ್ಬರದ ಗೆಲುವಿನೊಂದಿಗೆ ವಿಜಯದ ಸಂಭ್ರಮದಲ್ಲಿರುವ ನಟ ಶಾರುಖ್‌ ಖಾನ್‌ರನ್ನು ಉದ್ಯಮಿ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರ ಹಾಡಿ ಹೊಗಳಿದ್ದು, ಶಾರುಖ್‌ರನ್ನು ‘ನೈಸರ್ಗಿಕ ಸಂಪನ್ಮೂಲ’ ಎಂದು ಘೋಷಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

"ಎಲ್ಲಾ ದೇಶಗಳು ತಮ್ಮ ನೈಸರ್ಗಿಕ ಖನಿಜ ಸಂಪನ್ಮೂಲಗಳನ್ನು ಕಾಪಾಡುತ್ತವೆ ಮತ್ತು ಅವುಗಳನ್ನು ಗಣಿಗಾರಿಕೆ ಮಾಡುತ್ತವೆ, ಸಾಮಾನ್ಯವಾಗಿ ವಿದೇಶೀ ವಿನಿಮಯವನ್ನು ಗಳಿಸಲು ಅವುಗಳನ್ನು ರಫ್ತು ಮಾಡುತ್ತವೆ. ಬಹುಶಃ ಇದು ಶಾರುಖ್‌ ಖಾನ್‌ ಅವರನ್ನು ನೈಸರ್ಗಿಕ ಸಂಪನ್ಮೂಲವೆಂದು ಘೋಷಿಸುವ ಸಮಯ” ಎಂದು ಆನಂದ್‌ ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ.

ಜವಾನ್‌ ತೆರೆಕಂದು ಮೂರು ದಿನಗಳಲ್ಲಿ ವ್ಯಾಪಕ ಗಳಿಕೆ ಕಂಡ ಬೆನ್ನಲ್ಲೇ ಆನಂದ್‌ ಮಹೀಂದ್ರಾ ಅವರ ಈ ಟ್ವೀಟ್‌ ಬಂದಿದೆ.

ಆನಂದ್‌ ಮಹೀಂದ್ರಾ ಟ್ವೀಟ್‌ಗೆ ಶಾರುಖ್‌ ಖಾನ್‌ ಅವರು ಧನ್ಯವಾದ ತಿಳಿಸಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಅವರು ಉತ್ತರಿಸಿದ್ದು, “ನಾನು ಸಿನಿಮಾ ಮಾಡುವ ವಿಷಯದಲ್ಲಿ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ವಿನಮ್ರ ರೀತಿಯಲ್ಲಿ ಪ್ರಯತ್ನಿಸುತ್ತಲೇ ಇರುತ್ತೇನೆ. ಮತ್ತು 'ನೈಸರ್ಗಿಕ ಸಂಪನ್ಮೂಲ'ವಾಗಿ ನನಗೆ ಮಿತಿಯಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರೀತಿಯ ಅಪ್ಪುಗೆಗಳು ಸರ್” ಎಂದು ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News