×
Ad

‘ಕಿಂಗ್’ ಶೂಟಿಂಗ್‌ ವೇಳೆ ಅವಘಡ; ನಟ ಶಾರೂಖ್ ಖಾನ್ ಗೆ ಗಾಯ; ವರದಿ

Update: 2025-07-19 15:01 IST

ಶಾರೂಖ್ ಖಾನ್ (Photo: X/@iamsrk)

ಹೊಸದಿಲ್ಲಿ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ರ ಮುಂಬರುವ ಚಿತ್ರ ‘ಕಿಂಗ್’ ಸೆಟ್ ನಲ್ಲಿ ಸಾಹಸ ದೃಶ್ಯ ಶೂಟಿಂಗ್‌ ವೇಳೆ ಅವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಅವರಿಗೆ ಗಂಭೀರ ಗಾಯ ಆಗಿಲ್ಲ ಹಾಗೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶಾರುಖ್‌ ಖಾನ್ ಗಾಯಗೊಂಡ ಹಿನ್ನೆಲೆ ʼಕಿಂಗ್‌ʼ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

ಚಿತ್ರೀಕರಣದ ವೇಳೆ ಗಾಯಗೊಂಡ ಬೆನ್ನಿಗೇ, ಶಾರೂಖ್ ಖಾನ್ ಅವರು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಅವರು ಬ್ರಿಟನ್ ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. 

‘ಕಿಂಗ್’ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಶಾರುಖ್‌ ಖಾನ್ ತನ್ನ ಪುತ್ರಿ ಸುಹಾನಾ ಖಾನ್‌ ಜತೆ ನಟಿಸುತ್ತಿದ್ದಾರೆ.

‘ಕಿಂಗ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಹಾಗೂ ಅಭಯ್ ವರ್ಮಾ ಕೂಡಾ ನಟಿಸುತ್ತಿ‌ದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News