×
Ad

ಸ್ಮೃತಿ ಇರಾನಿ ಮತ್ತೆ ಕಿರುತೆರೆಗೆ : ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡ ಮಾಜಿ ಕೇಂದ್ರ ಸಚಿವೆ!

Update: 2025-07-07 19:09 IST

Photo | NDTV

ಹೊಸದಿಲ್ಲಿ: ಸ್ಮೃತಿ ಇರಾನಿ ಅವರು ಬಹುನಿರೀಕ್ಷಿತ ʼಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿʼ (Kyunki Saas Bhi Kabhi Bahu Thi) ಸೀಸನ್‌-2 ಧಾರಾವಾಹಿಯ ಮೂಲಕ ಕಿರುತೆರೆಗೆ ಮತ್ತೆ ಮರಳಲು ಸಜ್ಜಾಗಿದ್ದಾರೆ.

ತುಳಸಿ ವೀರ್ವಾನಿ ಪಾತ್ರದಲ್ಲಿರುವ ಸ್ಮೃತಿ ಇರಾನಿ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅವರು ಸಾಂಪ್ರದಾಯಿಕ ಮೆರೂನ್ ಬಣ್ಣದ ಸೀರೆಯನ್ನು ತೊಟ್ಟು ಗೃಹಿಣಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಿಂದಿ, ಕಪ್ಪು ಮಣಿಗಳ ಮಂಗಳಸೂತ್ರ ಮತ್ತು ಆಭರಣಗಳಲ್ಲಿ ಅವರು ಮಿಂಚಿದ್ದಾರೆ. ಧಾರಾವಾಹಿಯಲ್ಲಿನ ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ʼಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿʼ ಧಾರವಾಹಿ 2000 ಇಸವಿಯ ಆರಂಭದಿಂದ 2008ರವರೆಗೆ ಪ್ರಸಾರವಾಯಿತು. ಈ ಧಾರಾವಾಹಿ ಸತತ ಏಳು ವರ್ಷಗಳ ಕಾಲ ದೂರದರ್ಶನದಲ್ಲಿ ನಂಬರ್ ಒನ್ ಸ್ಥಾನವನ್ನು ಹೊಂದಿತ್ತು. ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತುಳಸಿ ವೀರ್ವಾನಿ ಪಾತ್ರದಲ್ಲಿ ಸ್ಮೃತಿ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದರು.


ತುಳಸಿ ವೀರ್ವಾನಿ ಪಾತ್ರದಲ್ಲಿರುವ ಸ್ಮೃತಿ ಇರಾನಿ

ಬಹುನಿರೀಕ್ಷಿತ ಧಾರಾವಾಹಿ ಕೊನೆಗೂ ತನ್ನ ಪುನರಾಗಮನಕ್ಕೆ ಸಜ್ಜಾಗಿದೆ. ʼಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿʼ ಸೀಸನ್ -2 ನಲ್ಲಿ ಸ್ಮೃತಿ ಇರಾನಿ ತುಳಸಿ ಪಾತ್ರದಲ್ಲಿ ಮತ್ತು ಅಮರ್ ಉಪಾಧ್ಯಾಯ ಮಿಹಿರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರವಾಹಿ ಜುಲೈ 3ರಂದು ಪ್ರಥಮ ಪ್ರದರ್ಶನಗೊಳ್ಳಬೇಕಿತ್ತು. ಆದರೆ, ನಿರ್ಮಾಣ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News