×
Ad

ತೆಲುಗು ನಟ ವಿಜಯ ರಂಗರಾಜು ಹೃದಯಾಘಾತದಿಂದ ನಿಧನ

Update: 2025-01-20 16:30 IST

ನಟ ವಿಜಯ ರಂಗರಾಜು (Photo credit: indiatoday.in)

ಹೊಸದಿಲ್ಲಿ: ತೆಲುಗು ನಟ ವಿಜಯ ರಂಗರಾಜು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೈದರಾಬಾದ್ ನಲ್ಲಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದ ವಿಜಯ ರಂಗರಾಜು ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯ ರಂಗರಾಜು ಇಬ್ಬರು ಹೆಣ್ಣುಮಕ್ಕಳಾದ ದೀಕ್ಷಿತಾ ಮತ್ತು ಪದ್ಮಿನಿ ಅವರನ್ನು ಅಗಲಿದ್ದಾರೆ. ರಾಜ್ ಕುಮಾರ್ ಎಂಬುವುದು ವಿಜಯ ರಂಗರಾಜು ಅವರ ಹುಟ್ಟು ಹೆಸರು. ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆಗೆ ಮೊದಲು ಅವರು ಚೆನ್ನೈನಲ್ಲಿ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. 1994ರ ಭೈರವ ದ್ವೀಪಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ್ದ ವಿಜಯ ರಂಗರಾಜು ಆ ಬಳಿಕ ತೆಲುಗು ಮತ್ತು ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News