×
Ad

ಖ್ಯಾತ ತೆಲುಗು ನಟ, ಪದ್ಮಶ್ರೀ ಕೋಟಾ ಶ್ರೀನಿವಾಸ ರಾವ್ ನಿಧನ

Update: 2025-07-13 11:35 IST

ಕೋಟಾ ಶ್ರೀನಿವಾಸ ರಾವ್ (Photo credit: X/@NewsArenaIndia)

ಚೆನ್ನೈ : ತೆಲುಗು ಚಲನಚಿತ್ರ ನಟ, ಬಿಜೆಪಿಯ ಮಾಜಿ ಶಾಸಕ ಕೋಟಾ ಶ್ರೀನಿವಾಸ ರಾವ್ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ 1942ರಲ್ಲಿ ಜನಿಸಿದ ಕೋಟಾ ಶ್ರೀನಿವಾಸ ರಾವ್, 1978ರಲ್ಲಿ 'ಪ್ರಾಣಮ್ ಖರೀಧು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಚಿತ್ರ ರಂಗಕ್ಕೆ ಪ್ರವೇಶಿಸುವ ಮೊದಲು ಅವರು ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಜುಲೈ 10 ರಂದು ಶ್ರೀನಿವಾಸ ರಾವ್ ತನ್ನ 83ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಕೋಟಾ ಶ್ರೀನಿವಾಸ ರಾವ್, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅವರು 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ 2015ರಲ್ಲಿ ಕೋಟಾ ಶ್ರೀನಿವಾಸ ರಾವ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಅವರು 1999ರಲ್ಲಿ ವಿಜಯವಾಡ ಪೂರ್ವದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News