×
Ad

ಹೊಸ ಜೇಮ್ಸ್ ಬಾಂಡ್ ಚಿತ್ರ ನಿರ್ದೇಶಿಸುವರೇ ಕ್ರಿಸ್ಟೋಫರ್ ನೋಲನ್ ?

Update: 2023-07-24 23:11 IST

Photo: @NolanAnalyst | twitter

ಹಾಲಿವುಡ್:‌ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಅವರು ಜೇಮ್ಸ್‌ ಬಾಂಡ್‌ ಸರಣಿ ಫ್ರಾಂಚೈಸಿಯ ಬಗ್ಗೆ ಶ್ಲಾಘನೆಯ ಮಾತುಗಳನ್ನು ಹಂಚಿಕೊಂಡಿದ್ದು, ಈ ಸರಣಿಯ ಚಿತ್ರವನ್ನು ನಿರ್ದೇಶನ ಮಾಡಲು ಸಿಗುವುದು ಅದ್ಭುತ ಅವಕಾಶ ಎಂದು ಬಣ್ಣಿಸಿದ್ದಾರೆ.

Happy Sad Confused ಪೋಡ್‌ಕಾಸ್ಟ್‌ನ ನಿರೂಪಕ ಜೋಶ್‌ ಹೊರೊವಿಟ್ಝ್‌ (Josh Horowitz) ಜೊತೆಗಿನ ಸಂವಾದದಲ್ಲಿ ನೋಲನ್‌ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಾಂಡ್‌ ಚಿತ್ರವನ್ನು ನಿರ್ದೇಶಲು ಅವಕಾಶ ಸಿಕ್ಕರೆ ಖುಷಿಯಿಂದ ಒಪ್ಪುವುದಾಗಿ ಅವರು ಹೇಳಿದ್ದಾರೆ.

“ಈ ಚಿತ್ರಗಳ ಪ್ರಭಾವ ನನ್ನ ಸಿನೆಮಾಗಳ ಮೇಲಿದೆ. ಹಾಗೆ ಹೇಳಲು ನನಗೆ ಯಾವ ನಾಚಿಕೆಯೂ ಇಲ್ಲ. ನಾನು ಆ ಸಿನೆಮಾಗಳನ್ನು ಇಷ್ಟಪಡುತ್ತೇನೆ. (ಸರಣಿಯ) ಯಾವುದಾದರೂ ಚಿತ್ರವನ್ನು ನಿರ್ದೇಶಿಸಲು ಅವಕಾಶ ಲಭಿಸುವುದು ಭಾಗ್ಯ” ಎಂದು ನೋಲನ್‌ ಹೇಳಿದ್ದಾರೆ.

ಆದರೆ, ಈ ಪತ್ತೇದಾರಿ ಸಿನೆಮಾ ಮಾಡುವುದೆಂದರೆ, ನಿರ್ದಿಷ್ಟ ಮಿತಿಗಳಿಂದ ಕೆಲಸ ಮಾಡಬೇಕಾಗುತ್ತದೆ, ಆದರೆ, ಸೃಜನಾತ್ಮಕ ಸ್ವಾತಂತ್ರ್ಯ ನೀಡಿದರೆ ಸಿನೆಮಾ ನಿರ್ದೇಶಿಸಬಹುದು ಎಂದೂ ಅವರು ಹೇಳಿದ್ದಾರೆ.

ಜುಲೈ 21 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ನೋಲನ್‌ ನಿರ್ದೇಶನದ ಓಪನ್‌ಹೈಮರ್‌ ಭಾರತದಲ್ಲೂ ಭಾರೀ ಮೆಚ್ಚುಗೆಯನ್ನು ಪಡೆದಿದೆ. ಈಗಾಗಲೇ ಕೋಟ್ಯಾಂತರ ರುಪಾಯಿಯ ವಹಿವಾಟನ್ನೂ ಸಿನೆಮಾ ನಡೆಸಿದೆ. ಸೈನ್ಸ್-ಫಿಕ್ಷನ್‌ ಸಿನೆಮಾ ಪ್ರಿಯರ ಪಾಲಿಗೆ ನೆಚ್ಚಿನ ನಿರ್ದೇಶಕರಾಗಿರುವ ನೋಲನ್‌, ಜೇಮ್ಸ್‌ ಬಾಂಡ್‌ ಸಿನೆಮಾಗೂ ಆಕ್ಷನ್‌ ಕಟ್‌ ಹೇಳುವ ಇರಾದೆ ವ್ಯಕ್ತಪಡಿಸಿರುವುದು ಅವರ ಅಭಿಮಾನಿಗಳು ಹಾಗೂ ಬಾಂಡ್‌ ಚಿತ್ರಗಳ ಸಿನಿಪ್ರಿಯರಿಗೂ ಕುತೂಹಲ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News