ಹಾಸನ ಮೇಯರ್ ಚಂದ್ರೇಗೌಡ ಅನರ್ಹ : ಆಯುಕ್ತರ ಆದೇಶ
Update: 2025-08-16 20:21 IST
ಹಾಸನ ಆ,16 : ಮಹಾನಗರ ಪಾಲಿಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರೇಗೌಡ ಅವರನ್ನು ರಾಜಕೀಯ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸಿರುವ ಕಾರಣದಿಂದಾಗಿ ಸ್ಥಾನದಿಂದ ಅನರ್ಹಗೊಳಿಸುವ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಪ್ರಕರಣ 3(1)(ಬಿ) ಹಾಗೂ 4ರ ಪ್ರಕಾರ ಪಕ್ಷದ ಸೂಚನೆಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ಚಂದ್ರೇಗೌಡ ರವರನ್ನು ಮೇಯರ್ ಹುದ್ದೆಯಿಂದ ಅನರ್ಹಗೊಳಿಸಲಾಗಿದೆ.
ಮೈಸೂರು ಪ್ರಾದೇಶಿಕ ಆಯುಕ್ತರು ತೀರ್ಪನ್ನು ಪ್ರಕಟಿಸಿದ್ದಾರೆ.