ಬೇಲೂರು | ಮಚ್ಚಿನಿಂದ ಕೊಚ್ಚಿ ಯುವಕನ ಹತ್ಯೆ
Update: 2025-10-27 23:27 IST
ಸಾಂದರ್ಭಿಕ ಚಿತ್ರ
ಬೇಲೂರು : ಯುವಕನೊಬ್ಬನನ್ನು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿರುವುದು ವರದಿಯಾಗಿದೆ.
ಚನ್ನಕೇಶವಗೌಡ್ರು ಬೀದಿಯ ನಿವಾಸಿ ಗಿರೀಶ್ (28) ಕೊಲೆಯಾದ ಯುವಕ. ಸುರಪುರ ಗ್ರಾಮದ ಶ್ರೀನಿವಾಸ್ ಅಲಿಯಾಸ್ ಸೀನ ಮಚ್ಚಿನಿಂದ ಕೊಚ್ಚಿ ಗಿರೀಶ್‌ನನ್ನು ಕೊಲೆಗೈದ ಆರೋಪಿ. ನಿನ್ನೆ ರಾತ್ರಿ ಯುವತಿ ವಿಚಾರಕ್ಕೆ ಗಿರೀಶ್ ಹಾಗೂ ಸೀನನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಶ್ರೀನಿವಾಸ್ ಮಚ್ಚು ಹಿಡಿದು ಗಿರೀಶ್ ಮೇಲೆ ಅಟ್ಯಾಕ್ ಮಾಡಿ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.