×
Ad

ಅರಕಲಗೂಡು| ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ : ಇಬ್ಬರು ಮೃತ್ಯು

Update: 2025-08-17 17:42 IST

ಅರಕಲಗೂಡು : ತಾಲ್ಲೂಕಿನ ಬಸವಾಪಟ್ಟಣ ಸಮೀಪ ಸ್ವಿಫ್ಟ್ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊಣನೂರಿನ ದರ್ಶನ್ (25), ಕಬ್ಬಳಿಗೆರೆಯ ರಂಗನಾಥ ಪ್ರಸಾದ್ (22) ಮೃತರು.

ಯುವಕರು ಸಿನಿಮಾ ವೀಕ್ಷಣೆಗೆಂದು ಮೈಸೂರಿಗೆ ತೆರಳುತ್ತಿದ್ದರು. ಚಾಲಕ ರಂಗನಾಥ್ ಪ್ರಸಾದ್‌ ವಾಹನವನ್ನು ಜೋರಾಗಿ ಓಡಿಸಿದ್ದರಿಂದ ರಾಜ್ಯ ಹೆದ್ದಾರಿ ವಿಭಜಕಕ್ಕೆ ಢಿಕ್ಕಿಯಾಗಿದೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ಜಖಂಗೊಂಡಿದೆ. ಕೊಣನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News