×
Ad

ಹಾಸನ | ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತ್ಯು : ಮೂವರಿಗೆ ಗಾಯ

Update: 2024-06-05 16:38 IST

ಸಾಂದರ್ಭಿಕ ಚಿತ್ರ

ಹಾಸನ : ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ಐವರು ಮಹಿಳೆಯರ ಪೈಕಿ ಇಬ್ಬರು ಮಹಿಳೆಯರು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟು ಉಳಿದ ಮೂವರು ಗಾಯಗೊಂಡಿರುವಂತಹ ಘಟನೆ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತ ಮಹಿಳೆಯರನ್ನು ಮುತ್ತಮ್ಮ (70), ಪುಟ್ಟಮ್ಮ (63) ಎಂದು ಗುರುತಿಸಲಾಗಿದ್ದು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಅಲ್ಲದೆ, ಗಂಭೀರ ಸ್ಥಿತಿಯಲ್ಲಿರುವ ಒಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಉಳಿದ ಇಬ್ಬರು ಅರಕಲಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ ಜೋಳ ಬಿತ್ತನೆಯಲ್ಲಿ ತೊಡಗಿದ್ದ ಮಹಿಳೆಯರು ಗುಡುಗು, ಸಿಡಿಲಿನ ಆರ್ಭಟದ ಸಹಿತ ಆರಂಭವಾದ ಮಳೆಯಿಂದ ರಕ್ಷಣೆ ಪಡೆಯಲು ಜಮೀನಿನಲ್ಲೇ ಇದ್ದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಆದರೆ ಮರಕ್ಕೆ ದಿಢೀರ್ ಬಡಿದ ಸಿಡಿಲು ಕೆಳಗೆ ನಿಂತಿದ್ದ ಇಬ್ಬರು ಮಹಿಳೆಯರ ಪ್ರಾಣ ತೆಗೆದರೆ, ಮೂವರು ಮಹಿಳೆಯರು ಕುಸಿದು ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ಬಳಿಕ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News