×
Ad

ಹಾಸನ: ಖಾಸಗಿ ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡಕ್ಕೆ ಕಾಣಿಸಿಕೊಂಡ ಬೆಂಕಿ, ಆತಂಕದಲ್ಲಿ ಹೊರ ಬಂದ ರೋಗಿಗಳು

Update: 2024-01-21 19:20 IST

ಹಾಸನ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ಕೆಲ ಸಮಯ ಆತಂಕದ ವಾತವರಣ ನಿರ್ಮಾಣವಾಗಿ ರೋಗಿಗಳು ಗಾಬರಿಯಿಂದ ಹೊರ ಬಂದ ಘಟನೆ ಭಾನುವಾರ ನಡೆದಿದೆ.

ನಗರದ ಶಂಕರಮಠ ರಸ್ತೆಯಲ್ಲಿರುವ ಮಂಜುನಾಥ ಆಸ್ಪತ್ರೆಯಲ್ಲಿ ಎಕ್ಸ್‌ರೇ ರೂಂನಲ್ಲಿ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಅದರ ಹೊಗೆ ಇಡೀ ಆಸ್ಪತ್ರೆ ವ್ಯಾಪಿಸಿದೆ. ಸ್ಥಳದಲ್ಲೆ ಇದ್ದ ಕುಟುಂಬಸ್ಥರು ಕೆಲ ರೋಗಿಗಳನ್ನು ಹೊರಗಡೆ ಕರೆ ತಂದರು. ಇಡೀ ಆಸ್ಪತ್ರೆಗೆ ವ್ಯಾಪಿಸಿದ ಹೊಗೆಯಿಂದ ರೋಗಿಗಳು ಗಾಬರಿಗೊಂಡರು  ಆಸ್ಪತ್ರೆಯಿಂದ ಓಡಿ ಹೊರ ಬರಬೇಕಾಯಿತು.

ಕೆಲ ಸಮಯದಲ್ಲಿ ಘಟನೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಆಗುತ್ತದ್ದ ಭಾರೀ ಅನಾಹುತವನ್ನು ತಪ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News