×
Ad

ಹಾಸನ | ಬಿಜೆಪಿ ಮುಖಂಡ ಐನೆಟ್ ವಿಜಿಕುಮಾರ್ ಸಹಿತ ಮೂವರ ಮೇಲೆ ಹಲ್ಲೆ

Update: 2024-04-12 23:49 IST

ಹಾಸನ : ನಗರದ ಎಂ.ಜಿ. ರಸ್ತೆ ಬಳಿ ಇರುವ ಅಂಗಡಿ ಮೇಲೆ ಏಳು ಜನ ಯುವಕರ ಗುಂಪೊಂದು ಏಕಾಏಕಿ ದಾಳಿ ಮಾಡಿ ಗಾಜುಗಳನ್ನು ಪುಡಿಪುಡಿ ಮಾಡಿದಲ್ಲದೇ ಬಿಜೆಪಿ ಮುಖಂಡ ಐನೆಟ್ ವಿಜಿಕುಮಾರ್ ಸಹಿತ ಮೂವರ ಮೇಲೆ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.

ಘಟನೆಯಲ್ಲಿ ಬಿಜೆಪಿ ಮುಖಂಡ ಐನೆಟ್ ವಿಜಿಕುಮಾರ್ ಆತನ ಸ್ನೇಹಿತರಾದ ಪ್ರಮೋದ್ ಮತ್ತು ಸಂದೇಶ್ ಅವರ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣ ಮೂವರು ಗಾಯಳುಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.

ಹಲ್ಲೆಗೊಳಗಾದ ಐನೆಟ್ ವಿಜಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರೀತಂ ಗೌಡರ ವಿರುದ್ಧ ನೀನು ಮಾತನಾಡುತ್ತೀಯಾ ಎಂದು ಹೇಳಿ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿಸಿದರು. ಹಲ್ಲೆ ಮಾಡಿದವರನ್ನು ನಾನು ನೋಡಿದ್ದೇನೆ. ಪ್ರೀತಂಗೌಡ ಅವರ ಕಡೆಯವರೇ ಈ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್. ಜೆಡಿಎಸ್ ಮುಖಂಡರಾದ ಸುಮುಖ ರಘು, ಬಿದರಿಕೆರೆ ಜಯರಾಂ, ಎಚ್.ಎಸ್. ಅನೀಲ್ ಕುಮಾರ್, ಆರ್.ಎಸ್.ಎಸ್. ಮುಖಂಡ ಮೋಹನ್ ಕುಮಾರ್, ವಿಶಾಲ್ ಅಗ್ರವಾಲ್ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News