×
Ad

ಹಾಸನ : ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮ್ಯಾನ್ ಮೃತ್ಯು

Update: 2024-02-21 19:10 IST

ರಂಗನಾಥ

ಹಾಸನ: ಲೈನ್ ದುರಸ್ತಿಗಾಗಿ ವಿದ್ಯುತ್ ಕಂಬ ಏರುವಾಗ ಆಯತಪ್ಪಿ ಬಿದ್ದು ಪ್ರೋಬೇಷನರಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ನಗರದ ಶ್ರೀನಗರ ಬಡಾವಣೆಯಲ್ಲಿ ವರದಿಯಾಗಿದೆ.

ತುಮಕೂರು ಮೂಲದ ತಿಮ್ಲಾಪುರ ಗ್ರಾಮದ ರಂಗನಾಥ (32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಸೆಸ್ಕ್ ನಲ್ಲಿ ಪ್ರೊಬೇಷನರಿ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ

ವಿದ್ಯುತ್ ಕಂಬ ಹತ್ತುತ್ತಿದ್ದ ರಂಗನಾಥ ಅವರು ಹಿಡಿತ ತಪ್ಪಿ ಕಂಬದಿಂದ ಕೆಳಗೆ ಬಿದ್ದರು. ಇದರಿಂದ ಕಂಬದ ಕೆಳಗೆ ಚರಂಡಿಗೆ ಹಾಕಿದ್ದ ಕಲ್ಲು ಅವರ ತಲೆಗೆ ಬಡಿದಿದು, ಪ್ರಜ್ಞೆ ಕಳೆದುಕೊಂಡು ಗಾಯಗೊಂಡಿದ್ದ ಅವರನ್ನು ಸಹೊದ್ಯೋಗಿಗಳು ತಕ್ಷಣವೇ  ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News