×
Ad

ಹಾಸನ: ತಾಯಿ-ಮಕ್ಕಳ ನಿಗೂಢ ಸಾವು

Update: 2024-01-02 22:21 IST

ಹಾಸನ: ನಗರದ ದಾಸರಕೊಪ್ಪಲಿನಲ್ಲಿ ತಾಯಿ ಮತ್ತು ಮಕ್ಕಳು ನಿಗೂಢವಾಗಿ ಸಾವಿಗೀಡಾದ ಘಟನೆ ನಡೆದಿದೆ.

ಶಿವಮ್ಮ (36), ಮಕ್ಕಳಾದ ಸಿಂಚನಾ (7) ಪವನ (10) ಮೃತರು ಎಂದು ಗುರುತಿಸಲಾಗಿದೆ.

 ಮನೆಯ ಕಿಟಕಿ, ಬಾಗಿಲು ಬಂದ್ ಮಾಡಿ ಮನೆಯೊಳಗೆ ವಿಷಾನಿಲ ತುಂಬಿಸಿ, ಅದರ ಸೇವನೆಯಿಂದ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಮೃತ ಶಿವಮ್ಮ ಪತಿ ತೀರ್ಥ ಪ್ರಸಾದ್ ತುಮಕೂರಿನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ. ಶಿವಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿಕೊಂಡು ದಾಸರಕೊಪ್ಪಲಿನಲಿ ವಾಸವಾಗಿದ್ದಳು. ತೀರ್ಥಪ್ರಸಾದ್ ಆಗಾಗ ಕರೆ ಮಾಡಿ ಪತ್ನಿ ಮಕ್ಕಳ ಜೊತೆ ಮಾತನಾಡುತ್ತಿದ್ದ. ಸೋಮವಾರ ಸಂಜೆ ಸಹ ಮಾತನಾಡಿ, ನಾನು ರಾತ್ರಿ ಹಾಸನಕ್ಕೆ ಬರುತ್ತಿದ್ದೇನೆ ಊಟಕ್ಕೆ ರೆಡಿ ಮಾಡು ಎಂದು ಹೇಳಿದ್ದ. ಆದರೆ ತೀರ್ಥ ಪ್ರಸಾದ್ ಬರುವುದರೊಳಗೆ ಪತ್ನಿ ಮಕ್ಕಳು ಜೀವ ಕಳೆದುಕೊಂಡಿದ್ದಾರೆ.

ಸುದ್ದಿ ತಿಳಿದ ಕೂಡಲೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಹಾಗೂ ಪೆನ್‌ಶೆನ್ ಮೊಹಲ್ಲಾ ಪೊಲೀಸರು, ಎಫ್‌ಎಎಲ್ ಮತ್ತು ಬೆರಳಚ್ಚು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News