×
Ad

ಹಾಸನ: ಕುಡಿಯಲು ಹಣ ನೀಡಲಿಲ್ಲವೆಂದು ತಾಯಿಯನ್ನು ಥಳಿಸಿ ಕೊಂದ ಮಗ

Update: 2024-11-06 11:48 IST

ಆರೋಪಿ ಭರತ್

ಹಾಸನ: ಕುಡಿಯಲು ಹಣ ನೀಡಲಿಲ್ಲವೆಂಬ ಕಾರಣಕ್ಕಾಗಿ ಯುವಕನೊಬ್ಬ  ಹೆತ್ತತಾಯಿಯನ್ನೇ ಮನಬಂದಂತೆ ಥಳಿಸಿ ಕೊಂದ ಘಟನೆ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ  ನಡೆದಿದೆ. 

ಚಿಕ್ಕಮ್ಮ (61) ಪುತ್ರನಿಂದಲೇ ಕೊಲೆಯಾದ ಮಹಿಳೆ.  ಆರೋಪಿ ಭರತ್ (26)  ಪೈಂಟರ್ ಆಗಿ ಕೆಲಸ ಮಾಡುತ್ತಿದ್ದು, ಕುಡಿತದ ದಾಸನಾಗಿದ್ದಾನೆ ಎನ್ನಲಾಗಿದೆ.  ಅ.29 ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಭರತ್  ಇನ್ನೂ ಕುಡಿಯಲು ಹಣ ನೀಡುವಂತೆ ತಾಯಿ ಚಿಕ್ಕಮ್ಮನನ್ನು ಒತ್ತಾಯಿಸಿದ್ದ. ಆದರೆ ತಾಯಿ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಭರತ್, ತಾಯಿಗೆ ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ಹಲ್ಲೆಯಿಂದ ಗಂಭೀರ ಗಾಯಗೊಂಡ ತಾಯಿ ಕುಸಿದು ಬಿದ್ದಿದ್ದರಿಂದ ಆರೋಪಿ ಭರತ್ ಪರಾರಿಯಾಗಿದ್ದ.‌ ವಿಷಯ ತಿಳಿದ ಗ್ರಾಮಸ್ಥರು ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದ ಚಿಕ್ಕಮ್ಮನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸಂಬಂಧಿಕರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ.

ಕೊಣನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News