×
Ad

ಹಾಸನ: ನಕಲಿ ಆಧಾರ್ ಕಾರ್ಡ್ ಬಳಕೆ; ಮೂವರು ಬಾಂಗ್ಲಾ ಪ್ರಜೆಗಳ ಬಂಧನ

Update: 2024-10-22 10:47 IST

ಹಾಸನ: ಹಾಸನ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ನಗರದಲ್ಲಿಯೇ ವಾಸಿಸುತ್ತಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಜಮಾಲ್ ಅಲಿ, ಫಾರೂಕ್ ಅಲಿ ಮತ್ತು ಅಕ್ಕಲ್ ಹೊಕ್ಕು ಎಂದು ಗುರುತಿಸಲಾಗಿದೆ.

ಬಂಧಿತರು ಹಾಸನ ನಗರದ 80 ಅಡಿ ರಸ್ತೆಯ ಗದ್ದೆಹಳ್ಳದ ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬವರ ಮನೆಯಲ್ಲಿ ವಾಸವಿದ್ದು, ಜುಬೇರ್ ಅವರ ಮನೆ ಕಟ್ಟಡ ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದಿದ್ದ ಇವರು ಭಾರತೀಯರೆಂದು ಕಾಣಿಸಿಕೊಂಡಿದ್ದರು. ಮೂವರ ವಿರುದ್ಧ ಪೆನ್ನನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಅಕ್ರಮವಾಗಿ ನುಸುಳಿರುವ ಈ ಪ್ರಜೆಗಳನ್ನು ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News