ಹಾಸನ: ಊಟ ಮಾಡುತ್ತಲೇ ಕುಸಿದು ಬಿದ್ದು ಯುವಕ ಮೃತ್ಯು
Update: 2025-07-30 07:58 IST
ಹಾಸನ: ಜು,30: ನಗರದ ಹೋಟೆಲ್ ವೊಂದರಲ್ಲಿ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದಾಗಲೇ ಮಂಗಳವಾರ ರಾತ್ರಿ ಯುವಕನೊಬ್ಬ ದಿಢೀರ್ ಮೃತಪಟ್ಟಿದ್ದಾನೆ.
ನೇಪಾಳ ಮೂಲದ ಅಂದಾಜು 28 ವರ್ಷದ ಯುವಕ ಮೃತಪಟ್ಟಿದ್ದಾನೆ. ನಗರದ ಬಿಎಂ ರಸ್ತೆಯ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಸ್ನೇಹಿತರೊಂದಿಗೆ ಬಸಟ್ಟಿಕೊಪ್ಪಲಿನ ಮಾಂಸಾಹಾರದ ಹೋಟೆಲ್ ಗೆ ಊಟಕ್ಕೆ ಬಂದಿದ್ದ.
ಗೆಳೆಯರೊಂದಿಗೆ ಮಾತನಾಡುತ್ತಾ ಊಟ ಮಾಡುತ್ತಿದ್ದಾಗ ವಾಂತಿಯಾಗಿದೆ. ನಂತರ ಕ್ಷಣಮಾತ್ರದಲ್ಲಿ ಉಸಿರಾಟ ನಿಂತಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನಗರ ಠಾಣೆ ಪಿಎಸ್ ಐ ಮೋಹನ್ ಕೃಷ್ಣ ಹಾಗೂ ಸಿಬ್ಬಂದಿ ಬಂದು ಪರಿಶೀಲಿಸಿದರು. ಅಂಬುಲೆನ್ಸ್ ಮೂಲಕ ಮೃತದೇಹವನ್ನು ಹಿಮ್ಸ್ ಗೆ ರವಾನಿಸಲಾಯಿತು.