ಹಾಸನ | ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗಲಿ ಇಬ್ಬರು ಮೃತ್ಯು
Update: 2025-06-17 23:46 IST
ಸಾಂದರ್ಭಿಕ ಚಿತ್ರ | PC : freepik.com
ಹಾಸನ : ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗಲಿ ಇಬ್ಬರು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಗಂಡಸಿ ಹೋಬಳಿ ಚಾಣಕೆರೆ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಗ್ರಾಮದ ನಿವಾಸಿಗಳಾದ ಬಾಳಪ್ಪಹಾಗೂ ಹೊಂಬೇಗೌಡ ಎಂದು ತಿಳಿದುಬಂದಿದೆ. ರೈತರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತೋಟದ ಮನೆಗೆ ಸಂಪರ್ಕ ಪಡೆದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಒಬ್ಬರಿಗೆ ತಗಲಿದೆ ಎನ್ನಲಾಗಿದೆ. ಇವರನ್ನು ರಕ್ಷಣೆ ಮಾಡಲು ಇನ್ನೋರ್ವ ಹೋದ ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.