ಚನ್ನರಾಯಪಟ್ಟಣ ಭೀಕರ ರಸ್ತೆ ಅಪಘಾತ | ಸ್ಥಳದಲ್ಲೇ ಇಬ್ಬರ ಮೃತ್ಯು, ನಾಲ್ವರು ಗಂಭೀರ
Update: 2025-07-20 00:55 IST
ಚನ್ನರಾಯಪಟ್ಟಣ : ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಮೇಲ್ಲೇತುವೆ ಬಳಿ ಶನಿವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವುದು ವರದಿಯಾಗಿದೆ.
ಬೆಂಗಳೂರು ಸಂಜಯನಗರ ನಿವಾಸಿ ಮೀನಾಕ್ಷಿ(42), ಚನ್ನರಾಯಪಟ್ಟಣ ಮೂಲದ ಪ್ರತಾಪ್ (35) ಸ್ಥಳದಲ್ಲೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯರು ಮತ್ತು ಪೊಲೀಸರು ಚನ್ನರಾಯಪಟ್ಟಣ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ವಿವರ: ಬೆಂಗಳೂರಿನಿಂದ ಹಾಸನದತ್ತ ಬರುತ್ತಿದ್ದ ಕಾರು ಮತ್ತು ಹಾಸನದ ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಸಾಗುತ್ತಿದ್ದ ಕಾರು ಶೆಟ್ಟಿಹಳ್ಳಿ ಮೇಲ್ಲೇತುವೆ ಬಳಿ ಮುಖಾಮುಖಿ ಢಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.
ಢಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಸಿಕ್ಕಿಹಾಕಿಕೊಂಡವರನ್ನು ಹೊರತೆಗೆಯಬೇಕಾಯಿತು.
ಈ ಸಂಬಂಧ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ