×
Ad

ಪರೀಕ್ಷಾ ಹಾಲ್ ನಲ್ಲೇ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿನಿ ಮೃತ್ಯು

Update: 2023-11-04 07:44 IST

ಸಾಂದರ್ಭಿಕ ಚಿತ್ರ Photo: PTI

ರಾಜ್ಕೋಟ್: ಹದಿನೈದು ವರ್ಷ ವಯಸ್ಸಿನ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಹಾಲ್ ನಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್ ನ ಅರ್ಮೇಲಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಮೃತ ಬಾಲಕಿಯನ್ನು ರಾಜಕೋಟ್ ನ ಜಸ್ದನ್ ತಾಲೂಕಿನ ಸಾಕ್ಷಿ ರಜೋಸರ ಎಂದು ಗುರುತಿಸಲಾಗಿದೆ. ಶಾಂತಬಾ ಗಜೇರಾ ಶಾಲೆಯ ಕೊಠಡಿಯಲ್ಲಿ ಶುಕ್ರವಾರ ಮುಂಜಾನೆ ಬಾಲಕಿ ಕುಸಿದು ಬಿದ್ದಳು ಎನ್ನಲಾಗಿದೆ. ತಕ್ಷಣವೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದರು. ಸಾವಿನ ಕಾರಣ ತಿಳಿಯುವ ಸಲುವಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕಳೆದ ಕೆಲ ತಿಂಗಳಿಂದ ಗುಜರಾತ್ ನಲ್ಲಿ ಅದರಲ್ಲೂ ಮುಖ್ಯವಾಗಿ ರಾಜಕೋಟ್ ಜಿಲ್ಲೆಯಲ್ಲಿ ಯುವಜನತೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆ ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕಿತರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News