×
Ad

ಉಕ್ರೇನ್ ಜಂಟಿ ಪಡೆಗಳ ಕಮಾಂಡರ್ ಬದಲಾವಣೆ

Update: 2024-06-25 22:18 IST

ಕೀವ್ : ಉಕ್ರೇನ್ ಸಶಸ್ತ್ರ ಪಡೆಗಳ ಜಂಟಿ ಪಡೆಗಳ ಕಮಾಂಡರ್ ಲೆ|ಜ| ಯೂರಿ ಸೊಡೋಲ್ ಅವರ ಸ್ಥಾನದಲ್ಲಿ ಬ್ರಿಗೇಡಿಯರ್ ಜನರಲ್ ಆಂಡ್ರಿಯ್ ಹಿನಟೋವ್‍ರನ್ನು ನೇಮಕಗೊಳಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.

ಈ ಕ್ರಮಕ್ಕೆ ಅವರು ಯಾವುದೇ ಕಾರಣವನ್ನು ನೀಡಿಲ್ಲ. ಹೆಸರಿಸಲಾಗದ ಜನರಲ್ ಒಬ್ಬರಿಂದಾಗಿ ರಶ್ಯ ವಿರುದ್ಧದ ಯುದ್ಧದಲ್ಲಿ ಉಕ್ರೇನ್‍ಗೆ ನಿರಂತರ ಹಿನ್ನಡೆಯಾಗುತ್ತಿದೆ ಮತ್ತು ಹಲವಾರು ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‍ನ ಅಝೋವ್ ತುಕಡಿಯ ಮುಖ್ಯಸ್ಥ ಬೊಹ್ಡಾನ್ ಕ್ರೊಟೆವೆಚ್ ಆರೋಪಿಸಿದ ಕೆಲವೇ ಗಂಟೆಗಳ ಬಳಿಕ ಅಧ್ಯಕ್ಷ ಝೆಲೆನ್‍ಸ್ಕಿ ಈ ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ.

ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂಬುದನ್ನು ಎಲ್ಲಾ ಮಿಲಿಟರಿ ಸಿಬಂದಿಗಳೂ ಅರಿತುಕೊಂಡಿದ್ದಾರೆ, ಯಾಕೆಂದರೆ ಅವರು ಮಾಡಿದ ಕೆಲಸಕ್ಕಾಗಿ 99%ದಷ್ಟು ಮಿಲಿಟರಿ ಅವರನ್ನು ದ್ವೇಷಿಸುತ್ತಿದೆ. ಅವರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಉಕ್ರೇನ್ ರಾಷ್ಟ್ರೀಯ ತನಿಖಾ ಸಮಿತಿಗೆ ಮನವಿ ಮಾಡಿದ್ದೇನೆ' ಎಂದು ಕ್ರೊಟೆವೆಚ್ ಟ್ವೀಟ್ (ಎಕ್ಸ್) ಮಾಡಿದ್ದರು. ಸೊಡೋಲ್‍ರನ್ನು ಬದಲಾವಣೆ ಮಾಡಿರುವ ಆದೇಶ ವರದಿಯಾಗುತ್ತಿದ್ದಂತೆಯೇ ಮತ್ತೊಂದು ಪೋಸ್ಟ್ ಮಾಡಿರುವ ಕ್ರೊಟೆವೆಚ್ `ಹಿನಟೋವ್ ಉತ್ತಮ ಅಧಿಕಾರಿ. ಮುಂಚೂಣಿ ಕ್ಷೇತ್ರದಿಂದ ಉತ್ತಮ ಸುದ್ದಿ ಬರಬಹುದು ಎಂದು ನಿರೀಕ್ಷಿಸುತ್ತಿದ್ದೇನೆ' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News