×
Ad

ಬ್ರಿಟನ್ : ಲೇಬರ್ ಪಕ್ಷದ ಅಭ್ಯರ್ಥಿ ಅಮಾನತು

Update: 2024-06-26 21:59 IST

ಲಂಡನ್ : ಮುಂಬರುವ ಸಾರ್ವತ್ರಿಕ ಚುನಾವಣೆಯ ಬಗ್ಗೆ ಬೆಟ್ಟಿಂಗ್ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖಂಡ ಕೆವಿನ್ ಕ್ರೆಗ್‍ರನ್ನು ಅಮಾನತುಗೊಳಿಸಿರುವುದಾಗಿ ಲೇಬರ್ ಪಕ್ಷ ಘೋಷಿಸಿದೆ.

ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆ ಎನಿಸಿರುವ ಸೆಂಟ್ರಲ್ ಸಫೋಕ್ ಕ್ಷೇತ್ರದಿಂದ ಕ್ರೆಗ್‍ರನ್ನು ಕಣಕ್ಕೆ ಇಳಿಸಲು ಲೇಬರ್ ಪಕ್ಷ ನಿರ್ಧರಿಸಿತ್ತು. ಆದರೆ ಬೆಟ್ಟಿಂಗ್ ಹಗರಣದ ಬಗ್ಗೆ ಬ್ರಿಟನ್‍ನ `ಜೂಜು ಕಾರ್ಯಾಚರಣೆ ಆಯೋಗ' ತನಿಖೆ ಪ್ರಾರಂಭಿಸಿರುವಂತೆಯೇ ಲೇಬರ್ ಪಕ್ಷ ಈ ಕ್ರಮ ಕೈಗೊಂಡಿದೆ.

ಬೆಟ್ಟಿಂಗ್ ನಡೆಸಿರುವುದನ್ನು ಕ್ರೆಗ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News