ಪಶ್ಚಿಮದೊಂದಿಗೆ ರಾಜತಾಂತ್ರಿಕ ಸಂಬಂಧ | ಕೆಳಮಟ್ಟಕ್ಕೆ ಇಳಿಸಲು ರಶ್ಯ ಚಿಂತನೆ
Update: 2024-06-27 21:51 IST
ಮಾಸ್ಕೋ: ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮತ್ತು ಅದರ ಮಿತ್ರದೇಶಗಳ ಆಳವಾದ ಒಳಗೊಳ್ಳುವಿಕೆಯ ಹಿನ್ನೆಲೆಯಲ್ಲಿ ಪಶ್ಚಿಮದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕೆ ಇಳಿಸುವ ಬಗ್ಗೆ ರಶ್ಯ ಪರಿಗಣಿಸುತ್ತಿದೆ ಎಂದು ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೆಸ್ಕೋವ್ `ಉಕ್ರೇನ್ ಸಂಘರ್ಷದಲ್ಲಿ ಪಾಶ್ಚಿಮಾತ್ಯ ದೇಶಗಳ ಒಳಗೊಳ್ಳುವಿಕೆ ಹೆಚ್ಚುತ್ತಿದೆ. ಉಕ್ರೇನ್ಲ್ಲಿನ ಬಿಕ್ಕಟ್ಟಿನಲ್ಲಿ ಪಾಶ್ಚಿಮಾತ್ಯರ ಈ ರೀತಿಯ ಪ್ರತಿಕೂಲ ಹಸ್ತಕ್ಷೇಪಕ್ಕೆ ಪ್ರತಿಕ್ರಿಯಿಸಲು ರಶ್ಯ ಒಕ್ಕೂಟವು ವಿವಿಧ ಆಯ್ಕೆಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದೆ. ಇದರಲ್ಲಿ ಪಶ್ಚಿಮದೊಂದಿಗಿನ ಸಂಬಂಧವನ್ನು ಕೆಳಮಟ್ಟಕ್ಕೆ ಇಳಿಸುವುದೂ ಒಂದು ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಇದುವರೆಗೆ ನಿರ್ಧಾರ ಕೈಗೊಂಡಿಲ್ಲ. ಆದರೆ ಈ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದರು.