×
Ad

ಅಮೆರಿಕ ರೈಲಿನಲ್ಲಿ ಉಕ್ರೇನ್ ನಿರಾಶ್ರಿತೆಯ ಬರ್ಬರ ಕೊಲೆ; ವಿಡಿಯೊ ವೈರಲ್

ಉಕ್ರೇನ್-ರಶ್ಯ ಯುದ್ಧದಿಂದ ನಲುಗಿ ಹೋಗಿ ಅಮೆರಿಕದಲ್ಲಿ ಸುರಕ್ಷಿತ ಬದುಕನ್ನು ಕಟ್ಟಿಕೊಳ್ಳಲು ಬಂದಿದ್ದ ಯುವತಿ

Update: 2025-09-07 17:13 IST

Screengrab: X/@CoffindafferFBI

ಉತ್ತರ ಕರೊಲಿನಾ (ಅಮೆರಿಕ): ಉಕ್ರೇನ್-ರಶ್ಯ ಯುದ್ಧದಿಂದ ನಲುಗಿ ಹೋಗಿ, ಅಮೆರಿಕದಲ್ಲಿ ಸುರಕ್ಷಿತ ಬದುಕನ್ನು ಕಟ್ಟಿಕೊಳ್ಳಲು ಬಂದಿದ್ದ ಉಕ್ರೇನ್ ಯುವತಿಯೊಬ್ಬಳನ್ನು ರೈಲಿನಲ್ಲಿ ದುಷ್ಕರ್ಮಿಯೋರ್ವ ಬರ್ಬರವಾಗಿ ಇರಿದು ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಈ ಘಟನೆ ಆಗಸ್ಟ್ 22ರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ರೈಲಿನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೃತಳನ್ನು 23 ವರ್ಷದ ಐರಿನಾ ಜರುಟ್ಸ್ಕಾ ಎಂದು ಗುರುತಿಸಲಾಗಿದೆ.

ಈ ಘಟನೆಯ ದೃಶ್ಯಾವಳಿಗಳನ್ನು ‘ಶಾರ್ಲೆಟ್ ಏರಿಯಾ ಟ್ರಾನ್ಸಿಟ್ ಸಿಸ್ಟಮ್’ ಬಿಡುಗಡೆ ಮಾಡಿದೆ.

ಶಾರ್ಲಟ್ ಪ್ಲಾಟ್ ಫಾರ್ಮ್ ನಿಂದ ಜರುಟ್ಸ್ಕಾ ರೈಲು ಹತ್ತಿ, ಮೊಬೈಲ್ ನೋಡುತ್ತಾ ಆಸೀನರಾಗಿದ್ದಾರೆ. ಆಕೆಯ ಹಿಂದೆ 34 ವರ್ಷದ ಡೆಕಾರ್ಲೋಸ್ ಬ್ರೌನ್ ಜೂನಿಯರ್ ಎಂಬ ವ್ಯಕ್ತಿ ಕುಳಿತಿದ್ದ. ರೈಲು ಹೊರಟ 4 ನಿಮಿಷಗಳ ನಂತರ, ಆಕೆಯ ಮೇಲೆ ಬರ್ಬರವಾಗಿ ದಾಳಿ ನಡೆಸಿರುವ ಆತ, ಆಕೆಯನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜರುಟ್ಸ್ಕಾಳನ್ನು ಹತ್ಯೆಗೈದ ಆರೋಪಿ ಬ್ರೌನ್ ನನ್ನು ಮುಂದಿನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹತ್ಯೆಗೆ ಆತ ಬಳಸಿದ್ದ ಚಾಕುವನ್ನು ಪ್ಲಾಟ್ ಫಾರ್ಮ್ ನಿಂದ ವಶಪಡಿಸಿಕೊಳ್ಳಲಾಗಿದೆ. 

2011ರಲ್ಲಿ ನಡೆದಿದ್ದ ಹತ್ಯೆ ಪ್ರಕರಣವೊಂದರಲ್ಲಿಯೂ ಬ್ರೌನ್ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News