ಇಸ್ರೇಲ್ ಹಡಗಿನ ಮೇಲೆ ಹೌದಿಗಳಿಂದ ಹೈಪರ್‍ಸಾನಿಕ್ ಕ್ಷಿಪಣಿ ಪ್ರಯೋಗ
Update: 2024-06-27 22:47 IST
PC ; NDTV
ಸನಾ : ಅರೆಬಿಯನ್ ಸಮುದ್ರದಲ್ಲಿ ಇಸ್ರೇಲ್ ಹಡಗಿನ ವಿರುದ್ಧ ದೇಶೀಯವಾಗಿ ನಿರ್ಮಿತ ಹೈಪರ್‍ಸಾನಿಕ್ ಕ್ಷಿಪಣಿಯನ್ನು ಬಳಸಿರುವುದಾಗಿ ಯೆಮನ್ ಮೂಲದ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಪ್ರತಿಪಾದಿಸಿದೆ.
ಏಡನ್ ಕೊಲ್ಲಿಯ ಸಮೀಪವಿದ್ದ ಇಸ್ರೇಲ್‍ನ ಎಂಎಸ್‍ಸಿ ಸಾರಾ ಕಂಟೈನರ್ ಹಡಗನ್ನು ಗುರಿಯಾಗಿಸಿ ಈ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ ಎಂದು ಹೌದಿಗಳ ವಕ್ತಾರರು ಹೇಳಿದ್ದಾರೆ. ಇಸ್ರೇಲ್‍ನ ಬಂದರು ನಗರ ಎಲಿಯಾಟ್‍ನತ್ತ ಹೈಪರ್‍ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವ ವೀಡಿಯೊವನ್ನು ಹೌದಿಗಳು ಬಿಡುಗಡೆಗೊಳಿಸಿದ್ದಾರೆ.
ಹೈಪರ್‍ಸಾನಿಕ್ ಕ್ಷಿಪಣಿ ದಾಳಿಯನ್ನು ಇಸ್ರೇಲ್ ಅಧಿಕಾರಿಗಳು ದೃಢಪಡಿಸಿದ್ದು ಯಾವುದೇ ನಷ್ಟ ಅಥವಾ ಸಾವುನೋವು ಸಂಭವಿಸಿಲ್ಲ ಎಂದಿದ್ದಾರೆ.