ಬಲೂಚಿಸ್ತಾನ | ಬಸ್ ಕಮರಿಗೆ ಉರುಳಿ ಕನಿಷ್ಠ 27 ಸಾವು
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್ : ಆಗ್ನೇಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಬಸ್ಸೊಂದು ಬುಧವಾರ ಆಳವಾದ ಕಮರಿಗೆ ಬಿದ್ದು ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ.
ಕ್ವೆಟ್ಟಾದಿಂದ ಟುರ್ಬಾಟ್ ನಗರಕ್ಕೆ ಪ್ರಯಾಣಿಸುತ್ತಿದ್ದ ಬಸ್ಸೊಂದು ಮುಂಜಾನೆ ವೇಳೆ ಬಲೂಚಿಸ್ತಾನ ಪ್ರಾಂತದ ಬೈಸ್ಮಾ ಪಟ್ಟಣದ ಸಮೀಪ ಅವಘಡಕ್ಕೀಡಾಯಿತು ಎಂದು ಸ್ಥಳೀಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರ್ವತ ಪ್ರದೇಶದ ರಸ್ತೆಯಲ್ಲಿ ಚಾಲಕನು ಬಸ್ಸನ್ನು ಟರ್ನ್ ಮಾಡುತ್ತಿದ್ದಾಗ, ವಾಹನವು ನಿಯಂತ್ರಣ ತಪ್ಪಿ ಅಳವಾದ ಕಮರಿಗೆ ಬಿದ್ದಿದೆಯೆಂದು ಸ್ಥಳೀಯ ಸರಕಾರಿ ಅಧಿಕಾರಿ ಇಸ್ಮಾಯಿಲ್ ಮೆಂಗಾಲ್ ತಿಳಿಸಿದ್ದಾರೆ. ಘಟನೆಗೆ ಕಾರಣವೇನೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಾಲಕನು ಮಂಪರು ನಿದ್ರೆಯಲ್ಲಿದ್ದುದರಿಂದ ಇಲ್ಲವೇ ಅತಿ ವೇಗದ ವಾಹನ ಚಾಲನೆಯಿಂದಾಗಿ ದುರಂತ ಸಂಭವಿಸಿರಬಹುದು ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಚಾಲಕ ಸೇರಿದಂತೆ ಇತರ 25 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.