×
Ad

ಪಾಕಿಸ್ತಾನ: ಪ್ರತ್ಯೇಕ ಶೂಟೌಟ್‍ನಲ್ಲಿ 7 ಯೋಧರು, 23 ಉಗ್ರರ ಸಾವು

Update: 2024-05-27 22:05 IST

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಪ್ರಕ್ಷುಬ್ಧ ವಾಯವ್ಯ ಪ್ರಾಂತದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಯೋಧರು ಮತ್ತು 23 ಭಯೋತ್ಪಾದಕರು ಸಾವನ್ನಪ್ಪಿರುವುದಾಗಿ ಸೇನೆ ಸೋಮವಾರ ಹೇಳಿದೆ.

ಖೈಬರ್ ಪಖ್ತೂಂಕ್ವಾದ ರಾಜಧಾನಿ ಪೇಷಾವರದ ಹೊರವಲಯದಲ್ಲಿ ರವಿವಾರ ರಾತ್ರಿ ನಡೆದ ಪ್ರಥಮ ಕಾರ್ಯಾಚರಣೆಯಲ್ಲಿ 6 ಭಯೋತ್ಪಾದಕರು ಮತ್ತು ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಟಾಂಕ್ ಜಿಲ್ಲೆಯಲ್ಲಿ ನಡೆದ ಎರಡನೆಯ ಶೂಟೌಟ್‍ನಲ್ಲಿ 10 ಭಯೋತ್ಪಾದಕರು, ಖೈಬರ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ 5 ಯೋಧರು ಹಾಗೂ 7 ಭಯೋತ್ಪಾದಕರು ಮೃತಪಟ್ಟಿರುವುದಾಗಿ ಪಾಕಿಸ್ತಾನದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News