×
Ad

ಹೌದಿ ಬಂಡುಕೋರರಿಂದ 153 ಯುದ್ಧ ಖೈದಿಗಳ ಬಿಡುಗಡೆ

Update: 2025-01-25 20:40 IST

PC : NDTV 

ಸನಾ: ಯೆಮನ್‌ ನ ಹೌದಿ ಬಂಡುಕೋರರು ಏಕಪಕ್ಷೀಯವಾಗಿ 153 ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸಿರುವುದಾಗಿ ರೆಡ್‍ಕ್ರಾಸ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಈ ಏಕಪಕ್ಷೀಯ ಬಿಡುಗಡೆ ಪ್ರಕ್ರಿಯೆಯು ಯೆಮನ್‌ ನಲ್ಲಿ ದೀರ್ಘಾವಧಿಯಿಂದ ಮುಂದುವರಿದಿರುವ ಬಿಕ್ಕಟ್ಟಿಗೆ ಪರಿಹಾರ ರೂಪಿಸುವಲ್ಲಿ ಪೂರಕ ಕ್ರಮವಾಗಿದೆ ಎಂದು ರೆಡ್‍ಕ್ರಾಸ್ ಹೇಳಿದೆ.

ಈ ಮಧ್ಯೆ, ವಿಶ್ವಸಂಸ್ಥೆಯ ಪರವಾಗಿ ಕೆಲಸ ಮಾಡುತ್ತಿದ್ದ 7 ಯೆಮನ್ ಪ್ರಜೆಗಳನ್ನು ಹೌದಿಗಳು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಹೌದಿಗಳು ನಡೆಸುತ್ತಿರುವ ಅನಿಯಂತ್ರಿತ ಬಂಧನ ಕ್ರಮ ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಖಂಡಿಸಿದ್ದು ಬಂಧಿತರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News