×
Ad

2023ರಲ್ಲಿ 1153 ಮಂದಿಗೆ ಮರಣದಂಡನೆ; ದಶಕದಲ್ಲೇ ಗರಿಷ್ಠ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ

Update: 2024-05-29 22:36 IST

PC : amnesty

ಲಂಡನ್ : ಸುಮಾರು ಒಂದು ದಶಕದ ಅವಧಿಯಲ್ಲಿ ಜಗತ್ತಿನಾದ್ಯಂತ ಮರಣದಂಡನೆಗೆ ಗುರಿಯಾದವರ ಸಂಖ್ಯೆ 2023ರಲ್ಲಿ ಅತ್ಯಧಿಕವಾಗಿತ್ತೆಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಬುಧವಾರ ತಿಳಿಸಿದೆ. ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಮರಣದಂಡನೆಯ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅದು ಹೇಳಿದೆ.

ಕಳೆದ ವರ್ಷ ಜಗತ್ತಿನಾದ್ಯಂತ 1,153 ಮಂದಿಯನ್ನು ಮರಣದಂಡನೆಗೆ ಒಳಪಡಿಸಲಾಗಿತ್ತು. 2015ರ ಬಳಿಕ ಇಷ್ಟೊಂದು ಸಂಖ್ಯೆಯಲ್ಲಿ ಮರಣದಂಡನೆ ನೀಡಿರುವುದು, ಇದು ಅತ್ಯಧಿಕವಾಗಿದೆ. ಅಲ್ಲದೆ ಕಳೆದ ವರ್ಷ ಮರಣದಂಡನೆಗೊಳಗಾದವರ ಪ್ರಮಾಣವು 2022ರಲ್ಲಿದ್ದುದಕ್ಕಿಂತ ಶೇ.30ರಷ್ಟು ಹೆಚ್ಚಳವಾಗಿದೆ.

ಇವೆಲ್ಲದರ ಹೊರತಾಗಿಯೂ, ಮರಣದಂಡನೆಯನ್ನು ಜಾರಿಗೊಳಿಸಿದ ರಾಷ್ಟ್ರಗಳ ಸಂಖ್ಯೆ ಅತ್ಯಂತ ಕಡಿಮೆಯೆಂದು, ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರುವ ಎನ್‌ಜಿಓ ಸಂಸ್ಥೆಯಾದ ಆ್ಯಮ್ನೆಸ್ಟಿ ಹೇಳಿದೆ.

ಆದರೆ ಚೀನಾ, ಉತ್ತರ ಕೊರಿಯಾ ಹಾಗೂ ವಿಯೆಟ್ನಾನಲ್ಲಿ, ಆಡಳಿತದಿಂದ ಹತ್ಯೆಗೀಡಾದ ಸಾವಿರಾರು ಜನರನ್ನು ಈ ಅಂಕಿ ಸಂಖ್ಯೆಗಳನ್ನು ಒಳಗೊಂಡಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಇರಾನ್‌ನಲ್ಲಿ ಮರಣದಂಡನೆಗೀಡಾದವರ ಸಂಖ್ಯೆಯಲ್ಲಿ ಕಳೆದ ವರ್ಷ ಶೇ. 50ರಷ್ಟು ಏರಿಕೆಯಾದಗಿರುವುದಾಗಿ ಆ್ಯಮ್ನೆಸ್ಟಿ ವರದಿ ತಿಳಿಸಿದೆ.

ಚೀನಾ, ಸೌದಿ ಆರೇಬಿಯ, ಸೋಮಾಲಿಯ ಹಾಗೂ ಅಮೆರಿಕ, 2023ರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮರಣದಂಡನೆಗಳನ್ನು ನಡೆಸಿದ ಇತರ ದೇಶಗಳಾಗಿ.

ಮರಣದಂಡನೆ ತೀರ್ಪುಗಳ ಘೋಷಣೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆಯೆಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ತಿಳಿಸಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News