ಇಸ್ರೇಲ್‌ನ ಹರ್ಮ್ಸ್ ಡ್ರೋನ್‌ಗಳು ಸೇರಿದಂತೆ 28 ಶತ್ರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್
Update: 2025-06-17 22:57 IST
Photo | avapress
ಟೆಹರಾನ್ : ಕಳೆದ 24 ಗಂಟೆಯಲ್ಲಿ ಇಸ್ರೇಲ್‌ನ ಹರ್ಮ್ಸ್ ಡ್ರೋನ್ ಸೇರಿದಂತೆ 28 ಶತ್ರು ವಿಮಾನಗಳನ್ನು ನಿಖರವಾದ ಗುಂಡಿನ ದಾಳಿಯಿಂದ ಹೊಡೆದುರುಳಿಸಿದ್ದೇವೆ ಎಂದು ಇರಾನ್ ತಿಳಿಸಿರುವ ಬಗ್ಗೆ ವರದಿಯಾಗಿದೆ.
ದೇಶದ ವಾಯು ರಕ್ಷಣಾ ಪಡೆ, ರಾಡಾರ್, ಕಣ್ಗಾವಲು, ಕ್ಷಿಪಣಿ ಮತ್ತು ಫಿರಂಗಿ ವ್ಯವಸ್ಥೆಗಳನ್ನು ಬಳಸಿಕೊಂಡು ಪ್ರತಿಕೂಲ ದಾಳಿಯನ್ನು ತಡೆದಿದೆ ಎಂದು ಇರಾನ್ ಸೇನೆ ಹೇಳಿದೆ.
ಹೊಡದುರುಳಿಸಿದ ಡ್ರೋನ್‌ಗಳಲ್ಲಿ ಒಂದು ಗುಪ್ತಚರ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿರುವ ಬೇಹುಗಾರಿಕೆ ಡ್ರೋನ್ ಎಂದು ಇರಾನ್ ಹೇಳಿದೆ.
ಇಸ್ರೇಲ್‌ನ ಹಲವಾರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೇನೆಯು ಈ ಮೊದಲು ಹೇಳಿತ್ತು. ಆದರೆ ಇಸ್ರೇಲ್ ಇದನ್ನು ನಿರಾಕರಿಸಿತ್ತು. ಇರಾನ್‌ನಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಸಿಬ್ಬಂದಿ ಅಥವಾ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ಹೇಳಿತ್ತು.