×
Ad

4 ಗಡಿ ಗ್ರಾಮಗಳನ್ನು ಅಝರ್‍ಬೈಜಾನ್‍ಗೆ ಹಿಂತಿರುಗಿಸಿದ ಅರ್ಮೇನಿಯಾ

Update: 2024-05-24 22:26 IST

PC : wikipedia

ಯೆರೆವಾನ್ : ಐತಿಹಾಸಿಕ ಪ್ರತಿಸ್ಪರ್ಧಿಗಳ ನಡುವಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ದಶಕಗಳ ಹಿಂದೆ ಸ್ವಾಧೀನ ಪಡಿಸಿಕೊಂಡಿದ್ದ ಗಡಿಭಾಗದ 4 ಗ್ರಾಮಗಳನ್ನು ಅರ್ಮೇನಿಯಾವು ಅಝರ್‍ಬೈಜಾನ್‍ಗೆ ಹಿಂತಿರುಗಿಸಿರುವುದಾಗಿ ವರದಿಯಾಗಿದೆ.

ವರದಿಯನ್ನು ಎರಡೂ ದೇಶಗಳು ದೃಢಪಡಿಸಿವೆ. ಈ ಹಿಂದಿನ ಸೋವಿಯತ್ ಒಕ್ಕೂಟದ ಎರಡು ದೇಶಗಳಾಗಿರುವ ಅರ್ಮೇನಿಯಾ ಮತ್ತು ಅಝರ್‍ಬೈಜಾನ್ ನಡುವೆ ನಗೋರ್ನೊ-ಕರಬಾಖ್ ಪ್ರದೇಶಗಳ ನಿಯಂತ್ರಣಕ್ಕೆ ಸಂಬಂಧಿಸಿ 1990ರಲ್ಲಿ ಹಾಗೂ 2020ರಲ್ಲಿ ಯುದ್ಧ ಸಂಭವಿಸಿದೆ.

3 ದಶಕಗಳಿಂದ ತನ್ನ ಕೈತಪ್ಪಿ ಅರ್ಮೇನಿಯಾದ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿದ್ದ ನಗೋರ್ನೋ-ಕರಬಾಖ್ ಪ್ರದೇಶವನ್ನು ಕಳೆದ ವರ್ಷ ಮಿಂಚಿನ ಕಾರ್ಯಾಚರಣೆಯಲ್ಲಿ ಅಝರ್‍ಬೈಜಾನ್ ವಶಪಡಿಸಿಕೊಂಡಿತ್ತು. ಆ ಬಳಿಕ ಉಭಯ ದೇಶಗಳ ನಡುವೆ ಶಾಶ್ವತ ಶಾಂತಿಯನ್ನು ಸ್ಥಾಪಿಸುವ ಕ್ರಮವಾಗಿ, 1990ರಲ್ಲಿ ತನ್ನ ಸೇನೆ ವಶಪಡಿಸಿಕೊಂಡಿದ್ದ 4 ಗ್ರಾಮಗಳನ್ನು ಅಝರ್‍ಬೈಜಾನ್‍ಗೆ ಮರಳಿಸಲು ಮಾರ್ಚ್‍ನಲ್ಲಿ ಅರ್ಮೇನಿಯಾ ಪ್ರಧಾನಿ ನಿಕೋಲ್ ಪಶಿನ್ಯಾನ್ ಸಮ್ಮತಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News