×
Ad

ಕ್ಯಾಲಿಫೋರ್ನಿಯಾದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ನಾಲ್ವರು ಮೃತ್ಯು, 10 ಜನರಿಗೆ ಗಾಯ

Update: 2025-11-30 12:50 IST

Phtoo | indiatoday

ಕ್ಯಾಲಿಫೋರ್ನಿಯಾ: ಸ್ಟಾಕ್ಟನ್ ನ ಬ್ಯಾಂಕ್ವೆಟ್ ಹಾಲ್ ವೊಂದರಲ್ಲಿ ಕೌಟುಂಬಿಕ ಕಾರ್ಯಕ್ರಮದ ವೇಳೆ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಸ್ಯಾನ್ ಜೋಕ್ವಿನ್ ಕೌಂಟಿ ಶರೀಫ್ ಕಚೇರಿಯ ವಕ್ತಾರ ಹೀದರ್ ಬ್ರೆಂಟ್ ಮಾಹಿತಿ ನೀಡಿದ್ದು,  ಘಟನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಇಬ್ಬರು ವಯಸ್ಕರು ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಟಾರ್ಗೆಟ್ ಮಾಡಿ ನಡೆಸಿರುವ ದಾಳಿ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಶಂಕಿತ ಶೂಟರ್ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ತನಿಖೆ ನಡೆಯುತ್ತಿದೆ.  ಶಂಕಿತನ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಂಪರ್ಕಿಸುವಂತೆ ಸ್ಯಾನ್ ಜೋಕ್ವಿನ್ ಕೌಂಟಿ ಜಿಲ್ಲಾ ಅಟಾರ್ನಿ ರಾನ್ ಫ್ರೀಟಾಸ್ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News