×
Ad

ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆಗೆ 2024ರ ಬೂಕರ್ ಪ್ರಶಸ್ತಿ

Update: 2024-11-13 21:56 IST

ಸಮಂತಾ ಹಾರ್ವೆ | PC :PTI

ಲಂಡನ್: ಬಾಹ್ಯಾಕಾಶ ನಿಲ್ದಾಣದ ಕುರಿತ ಕಾದಂಬರಿ `ಆರ್ಬಿಟಲ್'ಗಾಗಿ ಬ್ರಿಟನ್‌ ನ ಸಾಹಿತಿ ಸಮಂತಾ ಹಾರ್ವೆ 2024ರ ಬೂಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಬಾಹ್ಯಾಕಾಶದಲ್ಲಿರುವ ಅಂತರಾಷ್ಟ್ರೀಯ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳ ತಂಡವು ಭೂಮಿಯ ಸೌಂದರ್ಯ ಮತ್ತು ಸೂಕ್ಷ್ಮತೆಯನ್ನು ಅವಲೋಕಿಸುವುದು ಕಾದಂಬರಿಯ ತಿರುಳಾಗಿದೆ. ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವುದು ಮಗು ಕನ್ನಡಿಯಲ್ಲಿ ನೋಡುತ್ತಿರುವಂತೆ ಮತ್ತು ಕನ್ನಡಿಯಲ್ಲಿರುವ ವ್ಯಕ್ತಿ ತಾನೇ ಎಂದು ಮೊದಲ ಬಾರಿಗೆ ಅರಿತುಕೊಂಡಂತೆ. ಗಗನಯಾತ್ರಿಗಳ ಕುರಿತು ಸಂಶೋಧನೆ ನಡೆಸಿ, ಗಗನ ಯಾನಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸಿದ ಅನುಭವದ ಆಧಾರದಲ್ಲಿ ಕಾದಂಬರಿ ಬರೆದಿರುವುದಾಗಿ ಸಮಂತಾ ಹೇಳಿದ್ದಾರೆ.

ಸಮಂತಾ 2019ರ ಬಳಿಕ ಬೂಕರ್ ಪ್ರಶಸ್ತಿ ಗೆದ್ದ ಪ್ರಥಮ ಮಹಿಳೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News