×
Ad

ಅಂತರಾಷ್ಟ್ರೀಯ `ಸ್ಟಡಿ ಪರ್ಮಿಟ್' ಕಡಿತಗೊಳಿಸಿದ ಕೆನಡಾ: ವರದಿ

Update: 2025-11-27 21:29 IST

ಸಾಂದರ್ಭಿಕ ಚಿತ್ರ | Photo Credit : freepik.com

 

ಒಟ್ಟಾವ, ನ.27: ಕೆನಡಾ ಸರಕಾರವು ಅಂತರಾಷ್ಟ್ರೀಯ ಅಧ್ಯಯನ ಪರ್ಮಿಟ್‌ ಗಳನ್ನು ಕಡಿತಗೊಳಿಸಿದ್ದು ಇದು ಭಾರತೀಯ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ಮುಂದಿನ ವರ್ಷ ಅಂತಾರಾಷ್ಟ್ರೀಯ `ಸ್ಟಡಿ ಪರ್ಮಿಟ್'ಗಳಲ್ಲಿ 7% ಕುಸಿತಗಳನ್ನು ಕೆನಡಾ ಸರಕಾರ ನಿರೀಕ್ಷಿಸುತ್ತಿದ್ದು 2026ರ ಪರ್ಮಿಟ್ ವಿತರಣೆಯನ್ನು 4,08,000ಕ್ಕೆ ಮಿತಿಗೊಳಿಸಲಿದೆ. ಇದರಲ್ಲಿ ಹೊಸ ಆಗಮನಕ್ಕಾಗಿ 1,55,000 ವೀಸಾಗಳು ಮತ್ತು ಪ್ರಸ್ತುತ ವಿದ್ಯಾರ್ಥಿಗಳಿಗಾಗಿ 2,53,000 ವೀಸಾ ವಿಸ್ತರಣೆಗಳು ಒಳಗೊಂಡಿದೆ. ಈ ಗುರಿಯು 2025ರ ವಿತರಣಾ ಗುರಿಗಿಂತ 7% ಕಡಿಮೆ ಮತ್ತು 2024ರ ವಿತರಣಾ ಗುರಿಗಿಂತ 16% ಕಡಿಮೆಯಾಗಿದೆ ಎಂದು ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ(IRCC) ಇಲಾಖೆ ಹೇಳಿದೆ.

ಟೆಂಪರರಿ ಫಾರಿನ್ ವರ್ಕರ್ ಪ್ರೋಗ್ರಾಂ(ಟಿಎಫ್‍ಡಬ್ಲ್ಯೂಪಿ) ಮತ್ತು ಇಂಟರ್ ನ್ಯಾಷನಲ್ ಮೊಬಿಲಿಟಿ ಪ್ರೋಗ್ರಾಂ(ಐಎಂಪಿ)ಗಳ ಅಡಿಯಲ್ಲಿ ಹೊಸ ಉದ್ಯೋಗ ಪರ್ಮಿಟ್‌ ಗಳು 2026ರಲ್ಲಿ 2,30,000ಕ್ಕೆ ತಲುಪಿ ಬಳಿಕ 2027 ಮತ್ತು 2028ರಲ್ಲಿ ಕಡಿಮೆಯಾಗಲಿದೆ. ಈ ಕ್ರಮವು ಭಾರತೀಯ ಪ್ರಜೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News